Job Description: * ಪ್ರತಿ ವರ್ಷವು ಫೋರ್ಬ್ಸ್ ನಿಯತಕಾಲಿಕೆ ಪ್ರಪಂಚದಾದ್ಯಂತ ನಿರೂಪಕರು, ವ್ಯಾಪಾರ, ಲೋಕೋಪಕಾರ, CEO ಗಳು ಹೀಗೆ ಬೇರೆ ಬೇರೆ ವಲಯಗಳಲ್ಲಿನ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಪ್ರಕಟಣೆ ಮಾಡುತ್ತದೆ. * ಪ್ರಸ್ತುತ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಈ ಬಾರಿ ಭಾರತೀಯ ಇಬ್ಬರು ಮಹಿಳೆಯರು ಸ್ಥಾನ ಪಡೆದುಕೊಂಡಿದ್ದಾರೆ. * ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದವರು: ಭಾರತ ದೇಶದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಾಗೂ ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್ ಅವರು ಸ್ಥಾನ ಪಡೆದುಕೊಂಡಿದ್ದಾರೆ, ಈ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ 37 ನೇ ಸ್ಥಾನ ಪಡೆದುಕೊಂಡಿದ್ದಾರೆ, ಹಾಗೂ ಫಲ್ಗುಣಿ ನಾಯರ್ ಅವರು 88 ನೇ ಸ್ಥಾನವನ್ನು ಪಡೆದಿದ್ದಾರೆ. * ಪ್ರಸ್ತುತ ಫಲ್ಗುಣಿ ನಾಯರ್ ಅವರು ಸೌಂದರ್ಯ ಉತ್ಪನ್ನಗಳ ವಹಿವಾಟಿಗೆ ಬಂದು ಒಳ್ಳೆಯ ಹೆಸರನ್ನು ಸಂಪಾದಿಸಿದ್ದಾರೆ, ಹಾಗೂ ಸೆಲ್ಫ್ ಮೇಡ್ ಭಾರತೀಯ ಮಹಿಳಾ ಬಿಲಿಯನೇರ್ ಎಂದು ಹೆಸರುವಾಸಿಯಾಗಿದ್ದಾರೆ. * ಫೋರ್ಬ್ಸ್ನ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಮೆಕೆಂಜಿ ಸ್ಕಾಟ್ ಅಗ್ರ ಸ್ಥಾನವನ್ನು ಪಡೆದಿದ್ದಾರೆ, ಇವರು ಅಮೇರಿಕದ ಕಾದಂಬರಿಕಾರರಾಗಿದ್ದಾರೆ.