Job Description: *2018 ರ ಅಕ್ಟೋಬರ್ ನಲ್ಲಿ ಕ್ಷಿಪಣಿ ದಾಳಿ ನಿರೋಧಕ ವ್ಯವಸ್ಥೆ ಖರೀದಿಯ ಒಪ್ಪಂದಕ್ಕೆ ರಷ್ಯಾ ಮತ್ತು ಭಾರತ ಉಭಯ ದೇಶಗಳು ಸಹಿ ಹಾಕಿದ್ದವು. ಇದರಂತೆ ರಷ್ಯಾವು S - 400 ಏರ್ ಡಿಫೆನ್ಸ್ ಸಿಸ್ಟಮ್ 'ಟ್ರಯಂಪ್' ನ ಮೊದಲ ಘಟಕವನ್ನು ಭಾರತಕ್ಕೆ ಹಸ್ತಾಂತರಿಸಿದೆ. *400 ಕಿ.ಮೀ ದೂರದಲ್ಲಿರುವ ಮತ್ತು 30 ಕಿ. ಮೀ ಎತ್ತರದಿಂದ ಬರುತ್ತಿರುವ ಶತ್ರುಪಡೆಯ ಬಾಂಬರಗಳು, ಯುದ್ಧ ವಿಮಾನ, ಕ್ಷಿಪಣಿ, ಡ್ರೋನ್, ಗೂಢಚರ್ಯೆ ವಸ್ತುಗಳನ್ನು ಹೊಡೆದುರುಳಿಸಬಲ್ಲ ಶಕ್ತಿ ರಷ್ಯಾ ನಿರ್ಮಿತ S - 400 ಕ್ಷಿಪಣಿಗೆ ಇದೆ. ಜತೆಗೆ ತನ್ನ ರಕ್ಷಣೆಯನ್ನು ಮಾಡಿಕೊಳ್ಳುವ ವ್ಯವಸ್ಥೆಯು ಇದರಲ್ಲಿ ಇದೆ. * ರಷ್ಯಾ ನಿರ್ಮಿತ S - 400 ಕ್ಷಿಪಣಿಯನ್ನು ಭಾರತೀಯ ಸೇನೆಯು ಪಶ್ಚಿಮ ವಲಯದಲ್ಲಿ ಸ್ಥಾಪಿಸಲು ಮುಂದಾಗಿದೆ. *ಪಾಕಿಸ್ತಾನ ಮತ್ತು ಚೀನಾದ ಯಾವ ವಾಯುನೆಲೆಗಳಿಂದ ಬೆದರಿಕೆ ಇದೆಯೋ ಆ ಭಾಗದಲ್ಲಿ ಭಾರತ ಇವುಗಳನ್ನು ನಿಯೋಜಿಸಲಿದೆ. *ಭಾರತದ ಗಡಿ ಭಾಗದಲ್ಲಿ ಸಂಘರ್ಷಕ್ಕೆ ಇಳಿದಿರುವ ಚೀನಾ ದೇಶವು ಟಿಬೆಟನ್ ನಗರಿ ಗರ್ ಗುನ್ಸ್ ಮತ್ತು ನಾಯಿಂಗಚಿ ವಾಯುನೆಲೆಯಲ್ಲಿ ಎರಡು S - 400 ಸ್ಕ್ವ್ಯಾಡ್ರನ್ ನಿಯೋಜಿಸಿದೆ.