Job Description: * ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷದ ಮಕ್ಕಳ ವಿರುದ್ಧದ ಸೈಬರ್ ಅಪರಾಧದ ಪ್ರಮಾಣ ಶೇ. 400 ಕ್ಕೆ ಏರಿಕೆಯಾಗಿದೆ. *ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ 2020 ರಲ್ಲಿ ದಾಖಲಾಗಿರುವ 842 ಆನ್ಲೈನ್ ಅಪರಾಧ ಕೇಸ್ ಗಳ ಪೈಕಿ 738 ಕೇಸ್ ಗಳು ಮಕ್ಕಳನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿರುವಂಥದ್ದಾಗಿದೆ. *2019 ರಲ್ಲಿ ಮಕ್ಕಳ ವಿರುದ್ಧ ಆಗಿರುವ ಸೈಬರ್ ಅಪರಾಧಗಳ ಸಂಖ್ಯೆ 164 , 2018 ರಲ್ಲಿ ಇದು 117 ಮತ್ತು 2017 ರಲ್ಲಿ ಇದು 79 ಇತ್ತು. * 2020 ರ ದತ್ತಾಂಶ ಸಣ್ಣ ಪ್ರಮಾಣದ್ದೆಂಬಂತೆ ಭಾಸವಾದರೂ 2019 ಕ್ಕೆ ಹೋಲಿಸಿದರೆ ಹೆಚ್ಚಾಗಿರುವ ಪ್ರಮಾಣ ಎಚ್ಚರಿಕೆ ನೀಡುವಂತದ್ದು. * ಮಕ್ಕಳ ವಿರುದ್ಧದ ಸೈಬರ್ ಕ್ರೈಂ ಪ್ರಮಾಣ ಶೇಕಡಾ ಏರಿಕೆ ಇರುವ ಟಾಪ್ 5 ರಾಜ್ಯಗಳು :1 ಉತ್ತರ ಪ್ರದೇಶ, 2 ಕರ್ನಾಟಕ ,3 ಮಹಾರಾಷ್ಟ್ರ , 4 ಕೇರಳ, 5 ಒಡಿಶಾ. ದೇಶದಲ್ಲಿ ಕರ್ನಾಟಕ ನಂ. 2.