Job Description: * ಡಿಸೆಂಬರ್ 5 ರಂದು ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭವಾಗುವ ಟೂರ್ನಿಗೆ ಭಾರತದ 18 ಆಟಗಾರ್ತಿಯರ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. * ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಸೀನಿಯರ್ ಮಹಿಳಾ ಹಾಕಿ ತಂಡದಲ್ಲಿ ಆಡಿದ್ದ 21 ವರ್ಷದ ಲಾಲ್ ರೆಮ್ಸಿಯಾಮಿ ಭಾರತ ಜೂನಿಯರ್ ತಂಡದ ನಾಯಕತ್ವ ವಹಿಸಿದ್ದಾರೆ ಹಾಗೂ ಇಶಿಕಾ ಚೌಧರಿಯವರು ಉಪನಾಯಕಿಯ ಸ್ಥಾನವನ್ನುನಿಭಾಯಿಸಲಿದ್ದಾರೆ. * ಮಹಿಳಾ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿ ಪ್ರಶಸ್ತಿಗಾಗಿ ವಿಶ್ವದ 16 ತಂಡಗಳು ಸೆಣಸಲಿದ್ದು, ಈ ಮೊದಲು ನಡೆದ ಟೂರ್ನಿಯಲ್ಲಿ ಅಂದರೆ 2016 ರ ಟೂರ್ನಿಯಲ್ಲಿ ಅರ್ಜೆಂಟಿನಾ ಚಾಂಪಿಯನ್ ಆಗಿತ್ತು. * ಭಾರತವು 2013 ರ ಆವೃತ್ತಿಯಲ್ಲಿ ಇಂಗ್ಲೆಂಡನ್ನು ಮಣಿಸಿ ಕಂಚಿನ ಪದಕ ಗೆದ್ದಿದ್ದು ಜೂನಿಯರ್ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. * ಭಾರತ ಜೂನಿಯರ್ ತಂಡವು ಈ ಬಾರಿ ' ಸಿ ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಡಿಸೆಂಬರ್ 6 ರಂದು ರಷ್ಯಾ ತಂಡವನ್ನು ಎದುರಿಸಲಿದೆ.