Job Description: * ಆಸ್ಟ್ರೇಲಿಯಾದ ರೋವಿಲ್ಲೆ ಎಂಬಲ್ಲಿ ಮಹಾತ್ಮಾ ಗಾಂಧಿಯ ಪ್ರತಿಮೆ ಸ್ಥಾಪನೆಯಾದ ಕೆಲವೇ ಸಮಯದಲ್ಲಿ ದುಷ್ಕ್ರಮಿಗಳಿಂದ ಪ್ರತಿಮೆ ವಿರೂಪಗೊಳಿಸಲಾಗಿದೆ. * ಆಸ್ಟ್ರೇಲಿಯನ್ ಇಂಡಿಯನ್ ಕಮ್ಯೂನಿಟಿ ಕೇಂದ್ರದಲ್ಲಿ ಭಾರತದ 75 ನೇ ವರ್ಷಾಚರಣೆ ಅಂಗವಾಗಿ ಕಳೆದ ಶುಕ್ರವಾರದಂದು ಖುದ್ದಾಗಿ ಮಹಾತ್ಮಾ ಗಾಂಧಿಯ ಪ್ರತಿಮೆಯನ್ನು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೋರಿಸನ್ ಅನಾವರಣ ಮಾಡಿದ್ದರು.ಈ ಸಂದರ್ಭದಲ್ಲಿ ಭಾರತದ ಕೌನ್ಸಿಲ್ ಜೆನರಲ್ ರಾಜಕುಮಾರ ಹಾಗೂ ಆಸ್ಟ್ರೇಲಿಯಾದ ನಾಯಕರು ಸಾಕ್ಷಿಯಾಗಿದ್ದರು. * ಗಾಂಧಿಯ ಪ್ರತಿಮೆ ವಿರೂಪಗೊಳಿಸಿದ ಕೃತ್ಯವನ್ನು ಪ್ರಧಾನಿ ಮೋರಿಸನ್ ಖಂಡಿಸಿದ್ದಾರೆ.ಆಸ್ಟ್ರೇಲಿಯಾ ಈಗ ಜಗತ್ತಿನಲ್ಲಿ ಬಹು ಸಂಸ್ಕೃತಿ ಹಾಗೂ ವಲಸಿಗರ ದೇಶವೆಂದೇ ಖ್ಯಾತವಾಗಿದೆ. ಹೀಗಾಗಿ ಇಲ್ಲಿ ಸಾಂಸ್ಕೃತಿಕ ಸ್ಮಾರಕವನ್ನು ದ್ವಂಸ ಮಾಡುವುದನ್ನು ಸಹಿಸುವುದು ಅಸಾಧ್ಯ ಎಂದಿದ್ದಾರೆ.