Job Description: * ನಾಲ್ಕುವರೆ ವರ್ಷಗಳಿಂದ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಲ್ಲಿದ್ದ ರವಿಶಾಸ್ತ್ರಿಯವರು T20 ವಿಶ್ವಕಪ್ ಮುಕ್ತಾಯದೊಂದಿಗೆ ಅವಧಿ ಮುಕ್ತಾಯಗೊಳಿಸಿದ್ದಾರೆ. * ನಿವೃತ್ತ ಕ್ರಿಕೆಟಿಗರಿಗೆ ಮುಂದಿನ ವರ್ಷ ನಡೆಯಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ಗೆ ರವಿಶಾಸ್ತ್ರಿಯವರು ಆಯುಕ್ತರಾಗಿ ನೇಮಕಗೊಂಡಿದ್ದಾರೆ. * ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ಯ ಮೊದಲ ಆವೃತ್ತಿ ಮುಂದಿನ ವರ್ಷ ಯುಏಇ ಯಲ್ಲಿ ಆಯೋಜನೆಗೊಳ್ಳುತ್ತಿದೆ. * 'ಕ್ರಿಕೆಟ್ ಜೊತೆ ಮತ್ತೆ ಸಂಪರ್ಕ ಬೆಳೆಸುವದು ಖುಷಿಯ ವಿಚಾರ, ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಆಡುವವರು ಬಹುತೇಕ ಚಾಂಪಿಯನ್ ಗಳಾಗಿರುತ್ತಾರೆ' ಎಂದು 59 ವರ್ಷದ ರವಿಶಾಸ್ತ್ರಿಯವರು ತಿಳಿಸಿದ್ದಾರೆ. * ಈ ಲೀಗ್ ನಲ್ಲಿ ಭಾರತ ಸೇರಿದಂತೆ ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಇತರ ತಂಡಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ.