Job Description: * ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಪ್ರಮುಖರ ಸೇವಾವಧಿಯನ್ನು 5 ವರ್ಷದವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಎರಡು ಸುಗ್ರೀವಾಜ್ಞೆ ಹೊರಡಿಸಿದೆ. *ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಎರಡು ಸುಗ್ರೀವಾಜ್ಞೆಗಳಿಗೆ ಸಹಿ ಮಾಡಿದ್ದಾರೆ. *ಪ್ರಸ್ತುತ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಪ್ರಮುಖರ ಸೇವಾವಧಿ 2 ವರ್ಷವಾಗಿದೆ. *ಈ ಎರಡು ತನಿಖಾ ಸಂಸ್ಥೆಗಳ ಮುಖ್ಯಸ್ಥರ ಎರಡು ವರ್ಷದ ಅಧಿಕಾರ ಅವಧಿ ಮುಗಿದ ನಂತರ ಪ್ರತಿ ವರ್ಷದಂತೆ ಮೂರೂ ಭಾರಿ ವಿಸ್ತರಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. *ಒಟ್ಟು 5 ವರ್ಷ ಮುಗಿದ ನಂತರ ಅಂಥವರ ಸೇವಾವಧಿಯನ್ನು ಮತ್ತೆ ವಿಸ್ತರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.