Job Description: * ಪ್ರಸ್ತುತ ಗುಜರಾತ್ ರಾಜ್ಯದ ಅಹಮದಾಬಾದ್ನಲ್ಲಿನ ಕಲಾತ್ಮಕ ಸರ್ದಾರ್ಧಂ ಭವನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಸಭೆಯ ಮೂಲಕ ಉದ್ಘಾಟಿಸಿದರು, ಹಾಗೂ ಸರ್ದಾರ್ಧಂ ಹಂತ- II ಕನ್ಯಾ ಛತ್ರಾಲಯದ ಶಿಲಾನ್ಯಾಸವನ್ನು ನೆರವೇರಿಸಿದರು. * ಅಹಮದಾಬಾದ್ನಲ್ಲಿನ ಕಲಾತ್ಮಕ ಸರ್ದಾರ್ಧಂ ಭವನವನ್ನು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. * ಈ ಸರ್ದಾರ್ಧಂ ಭವನವನ್ನು ಪಾಟಿದಾರ್ ಸಮಾಜದಿಂದ ಗುಜರಾತ್ ರಾಜ್ಯದ ಅಹಮದಾಬಾದ್ನ ವೈಷ್ಣೋದೇವಿ ವೃತ್ತದಲ್ಲಿ ನಿರ್ಮಿಸಲಾಗಿದೆ. * ಈ ಭವನವು ಗ್ರಂಥಾಲಯ, ಹಾಸ್ಟೆಲ್, ವೃತ್ತಿ ಮಾರ್ಗದರ್ಶನ ಮತ್ತು ಹುಡುಗರಿಗೆ ತರಬೇತಿ ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಿಂದ ಬರುವ ಹುಡುಗಿಯರು ಮತ್ತು ವಿವಿಧೋದ್ದೇಶ ಆಡಿಟೋರಿಯಂನಂತಹ ಆಧುನಿಕ ಸೌಲಭ್ಯಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ. * ಕನ್ಯಾ ಛತ್ರಾಲಯವು ಅವರ ಆರ್ಥಿಕ ಮಾನದಂಡಗಳನ್ನು ಪರಿಗಣಿಸದೆ 2000 ಹುಡುಗಿಯರನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಈ ಎರಡೂ ಸಂಸ್ಥೆಗಳನ್ನು ಅರ್ಪಿಸಲಾಗಿದೆ. * ಈ ಸರ್ದಾರ್ಧಮ್ ಭವನವು ಮುಂದಿನ ಪೀಳಿಗೆಯ ಜೀವನದಲ್ಲಿ ಸರ್ದಾರ್ ಪಟೇಲ್ ಅನುಸರಿಸಿದ ತತ್ವಗಳನ್ನು ಅನುಸರಿಸಿ ಜೀವನ ನಡೆಸಲು ಪ್ರೇರೇಪಿಸುತ್ತದೆ, ಹಾಗೂ ಭಾರತದ ಮುಂದಿನ ಪೀಳಿಗೆಗೆ ಅಧಿಕಾರ ನೀಡಲಿದೆ. * ಸರ್ದಾರ್ಧಂನ ಮಿಷನ್: ಶಿಕ್ಷಣ, ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಒದಗಿಸುವ ಮೂಲಕ ಮಹಿಳಾ ಸಬಲೀಕರಣ, ತಂಬಾಕು, ಮದ್ಯ, ಗುಟಕ ಮುಂತಾದ ಆರೋಗ್ಯ-ಅಪಾಯಕಾರಿ ಅಭ್ಯಾಸಗಳ ನಿರ್ಮೂಲನೆ. * ಮೊದಲ ಹಂತದಲ್ಲಿ 2000 ಬಾಲಕರು ಮತ್ತು ಬಾಲಕಿಯರಿಗೆ ಹಾಸ್ಟೆಲ್ ಸೌಲಭ್ಯಗಳನ್ನು ನೀಡಲಿದೆ, ಹಾಗೂ 2 ನೇ ಹಂತದಲ್ಲಿ 8000 ಬಾಲಕರು ಮತ್ತು ಬಾಲಕಿಯರಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.