Job Description: * ತಮಿಳುನಾಡು ರಾಜ್ಯದ ಕವಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಭಾರತಿಯವರ ಪುಣ್ಯತಿಥಿ ಸೆಪ್ಟೆಂಬರ್ 11 ನ್ನು 'ಮಹಾಕವಿ ದಿನ'ವನ್ನಾಗಿ ಆಚರಿಸಲು ತಮಿಳುನಾಡು ಸರ್ಕಾರ ತೀರ್ಮಾನಿಸಿದೆ. * 2021 ರ ಸೆಪ್ಟೆಂಬರ್ 11 ರಂದು ಕವಿ ಸುಬ್ರಹ್ಮಣ್ಯ ಭಾರತಿಯವರ 100 ನೇ ಮರಣೋತ್ಸವವನ್ನು ತಮಿಳನಾಡು ಸರ್ಕಾರ ಆಚರಿಸಲಿದೆ. * ಕವಿ ಸುಬ್ರಹ್ಮಣ್ಯ ಭಾರತಿಯವರ ಶತಮಾನೋತ್ಸವದ ನಿಮಿತ್ತ, ಮುಂದಿನ ಒಂದು ವರ್ಷದವರೆಗೆ ರಾಜ್ಯದ ಭಾರತೀಯಾರ್ ಸ್ಮಾರಕ ಭವನದಲ್ಲಿ ಸಾಪ್ತಾಹಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳಲಾಗುವದು ಮತ್ತು ಸರ್ಕಾರವು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ನಡೆಸಲಾಗುತ್ತದೆ ಅದರಲ್ಲಿ ಗೆದ್ದವರಿಗೆ ಒಂದು ಲಕ್ಷ ರೂ. ಬಹುಮಾನದ ಜೊತೆಗೆ 'ಭಾರತಿ ಯುವ ಕವಿ ಪ್ರಶಸ್ತಿ' ಎಂದು ತಮಿಳು ಸರ್ಕಾರ ತಿಳಿಸಿದೆ. * ತಮಿಳನಾಡು ಸರ್ಕಾರವು ವಿಶ್ವ ತಮಿಳು ಸಂಘಗಳ ಸಹಭಾಗಿತ್ವದಲ್ಲಿ 'ಪರೆಂಗಂ ಭಾರತಿ' ಎಂಬ ವಿಷಯದ ಅಡಿಯಲ್ಲಿ ಕಾರ್ಯಕ್ರಮಗಳನ್ನು ನೆರವೇರಿಸಲಿದೆ.