Job Description: * ಅಮೆಜಾನ್ ಇಂಡಿಯಾ 2021 ರ ಸೆಪ್ಟೆಂಬರ್. 2 ರಂದು ಕಿಸಾನ್ ಸ್ಟೋರ್ ನ್ನು ಆರಂಭಿಸಿದೆ, ಈ ಕಿಸಾನ್ ಮಳಿಗೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರಾರಂಭಿಸಿದ್ದಾರೆ. * ಕಿಸಾನ್ ಸ್ಟೋರ್ ಒಂದು ಆನ್ಲೈನ್ ವೇದಿಕೆಯಾಗಿದೆ, ಈ ವೇದಿಕೆಯು ರೈತರಿಗೆ ಕೃಷಿ ಉಪಕರಣಗಳು ಹಾಗೂ ಬಿತ್ತನೆ ಬೀಜಗಳು, ಸಸ್ಯ ಸಂರಕ್ಷಣೆ, ಪೋಷಣೆ ವಸ್ತುಗಳನ್ನು ಪಡೆಯಲು ಸಹಾಯಮಾಡಲಿದೆ. * ಪ್ರಸ್ತುತ ಈ ಕಿಸಾನ್ ಮಳಿಗೆಯು ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂನಂತಹ ಭಾಷೆಗಳಲ್ಲಿ ವ್ಯವಹರಿಸಲು ಲಭ್ಯವಿರಲಿದೆ.