Job Description: * ಕೇಂದ್ರ ಆಯುಷ್ ಸಚಿವಾಲಯವು ಭಾರತದ ಸುಮಾರು 45 ಸ್ಥಳಗಳಿಂದ 'ಆಯುಷ್ ಆಪ್ಕೆ ದ್ವಾರ' ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. * ಈ 'ಆಯುಷ್ ಆಪ್ಕೆ ದ್ವಾರ' ಅಭಿಯಾನದಲ್ಲಿ ಸುಮಾರು 21 ರಾಜ್ಯಗಳು ಪಾಲ್ಗೊಳ್ಳಲಿವೆ, ಹಾಗೂ ಈ ಅಭಿಯಾನದ ಮೂಲಕ ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ ಅಭಿಯಾನದ ಮೂಲಕ ಕೇವಲ ಒಂದೇ ವರ್ಷದಲ್ಲಿ ಭಾರತದಲ್ಲಿನ 75 ಲಕ್ಷ ಮನೆಗಳಿಗೆ ಔಷಧೀಯ ಸಸ್ಯ ಸಸಿಗಳನ್ನು ನೀಡುವ ಉದ್ದೇಶದಿಂದ ಆಯುಷ್ ಆಪ್ಕೆ ದ್ವಾರ ಅಭಿಯಾನವನ್ನು ಆರಂಭಿಸಲಾಗಿದೆ. * ಈ ಮೊದಲು ಆಯುಷ್ ಸಚಿವಾಲಯವನ್ನು 'ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಸೋವ-ರಿಗ್ಪಾ ಮತ್ತು ಹೋಮಿಯೋಪತಿ ಸಚಿವಾಲಯ' ಎಂದು ಕರೆಯುತ್ತಿದ್ದರು, ಹಾಗೂ ಇದನ್ನು 2014 ರ ನವೆಂಬರ್. 9 ರಂದು ಸ್ಥಾಪನೆ ಮಾಡಲಾಗಿದೆ, ಮತ್ತೇ ಈ ಸಚಿವಾಲಯವನ್ನು 2021 ರ ಏಪ್ರಿಲ್. 13 ರಂದು 'ಆಯುಷ್ ಸಚಿವಾಲಯ' ಎಂದು ಮರುನಾಮಕರಣ ಮಾಡಲಾಯಿತು.