Job Description: * ಪ್ರಸ್ತುತ 2021 ರ ಸೆಪ್ಟೆಂಬರ್. 3 ರಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಎರಡು ಕೃಷಿ ಯೋಜನೆಗಳನ್ನು ಆರಂಭಿಸಿದ್ದಾರೆ. * ಅರುಣಾಚಲ ಪ್ರದೇಶದ ಕೃಷಿ ವಲಯದಲ್ಲಿ ಒಂದು ಯೋಜನೆಯನ್ನು ಆರಂಭಿಸಲಾಗಿದೆ, ಅದುವೇ ‘ಆತ್ಮನಿರ್ಭರ್ ಕೃಷಿ ಯೋಜನೆ’ಯಾಗಿದೆ. * ಇನ್ನೊಂದು ತೋಟಗಾರಿಕಾ ವಲಯದಲ್ಲಿ 2 ನೇ ಯೋಜನೆಯನ್ನು ಆರಂಭಿಸಲಾಗಿದೆ, ಅದುವೇ 'ಆತ್ಮನಿರ್ಭರ್ ಬಾಗವಾನಿ ಯೋಜನೆ', ಪ್ರಸ್ತುತ ಈ ಆತ್ಮನಿರ್ಭರ್ ಕೃಷಿ ಯೋಜನೆಗೆ 120 ಕೋಟಿ ರೂ. ಮತ್ತು ಆತ್ಮನಿರ್ಭರ್ ಬಾಗವಾನಿ ಯೋಜನೆಗೆ 60 ಕೋಟಿ ರೂ. ಘೋಷಣೆ ಮಾಡಲಾಗಿದೆ. * ಈ ಯೋಜನೆಗಳನ್ನು ಪಡೆಯಲು ಅಲ್ಲಿನ ರೈತರು ಸ್ವ ಸ್ವಾಧೀನ ಪ್ರಮಾಣಪತ್ರ, ಹಾಗೂ ಯಾವುದೇ ಭೂ ದಾಖಲೆಯು SHG ಗಳಿಗೆ ಅಗತ್ಯವಿಲ್ಲ, ಆದರೆ ಕೇವಲ EAC, CO ಅಥವಾ BDO ನಂತಹ ಸರಳ ಪ್ರಮಾಣಪತ್ರಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ. * ಈ ಯೋಜನೆಯಡಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅರುಣಾಚಲ ಪ್ರದೇಶ ಗ್ರಾಮೀಣ ಬ್ಯಾಂಕ್ ಮತ್ತು ಅರುಣಾಚಲ ಪ್ರದೇಶ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಂದ ಫಲಾನುಭವಿಗಳಿಗೆ ಕ್ರೆಡಿಟ್ ಲಿಂಕ್ ನೀಡಲಾಗುತ್ತದೆ, ಅಲ್ಲದೇ ಶೇ. 45 ರಷ್ಟು ಅರುಣಾಚಲ ಪ್ರದೇಶ ಸರ್ಕಾರದ ಸಬ್ಸಿಡಿಯಾಗಿ, ಹಾಗೂ ಶೇ. 45 ರಷ್ಟು ಬ್ಯಾಂಕ್ ಸಾಲವಾಗಿ ನೀಡುತ್ತದೆ, ರೈತರು ಕೇವಲ ಶೇ. 10 ರಷ್ಟು ಭರಿಸಬೇಕಾಗುತ್ತದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.