Job Description: * ಪ್ರಸ್ತುತ ಅಫ್ಗಾನಿಸ್ತಾನದ ಯಾವುದೇ ಪ್ರಜೆ ಭಾರತಕ್ಕೆ ಬರಲು ಕಡ್ಡಾಯವಾಗಿ ಇ-ವೀಸಾ ಪಡೆದಿರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ, ಪ್ರಸ್ತುತ ಭಾರತ ಸರ್ಕಾರವು ಅಫ್ಗಾನಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರವನ್ನು ಕೈಗೊಂಡಿದೆ. * ಕೇಂದ್ರ ಸರ್ಕಾರವು ಇತ್ತೀಚಿಗೆ 'ಇ-ತುರ್ತು ಎಕ್ಸ್-ಮಿಸ್ಕ್, ವೀಸಾ'ವನ್ನು ಪರಿಚಯಿಸಿದೆ. * ಅಫ್ಗಾನಿಸ್ತಾನ ಪ್ರಜೆಗಳ ವೀಸಾ ಅರ್ಜಿಗಳನ್ನು ನವದೆಹಲಿಯಲ್ಲಿ ಪರಿಶೀಲಿಸಲಾಗುವದು ಎಂದು ಅಧಿಕಾರಿಗಳು ಹೇಳಿದ್ದಾರೆ. * ಪ್ರಸ್ತುತ ಭಾರತ ಸರ್ಕಾರವು ನೀಡುವ ಈ 'ಇ-ತುರ್ತು ಎಕ್ಸ್-ಮಿಸ್ಕ್, ವೀಸಾ' ಆರು(6) ತಿಂಗಳವರೆಗೆ ಮಾನ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ, ಹಾಗೂ ಅಫ್ಗಾನಿಸ್ತಾನ ದೇಶದ ಯಾವುದೇ ಧರ್ಮದವರು ಇ-ವೀಸಾಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.