Job Description: * ಪ್ರಸ್ತುತ ಮೇಘಾಲಯದ ಮಾಜಿ ಶಾಸಕ ಜೂಲಿಯಸ್ ಡೋರ್ಫಾಂಗ್ ಅವರು ಸುಮಾರು '5' ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸ್ಥಳೀಯ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ 25 ವರ್ಷ ಜೈಲು ಶಿಕ್ಷೆ ಹಾಗೂ 15 ಲಕ್ಷ ದಂಡ ವಿಧಿಸಿದೆ. * ಪ್ರಸ್ತುತ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಥವಾ ಪೋಕ್ಸೊ ಕಾಯಿದೆ ಅಡಿಯಲ್ಲಿ ನ್ಯಾಯಾಧೀಶರು ಈ ತೀರ್ಪನ್ನು ನೀಡಿದ್ದಾರೆ, ಅಲ್ಲದೇ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ '3' ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. * ಶಾಸಕ ಜೂಲಿಯಸ್ ಡೋರ್ಫಾಂಗ್ ಅವರು 2017 ರಲ್ಲಿ ಶಾಸಕರಾಗಿದ್ದರು, ಆ ಸಂಧರ್ಭದಲ್ಲಿ 14 ವರ್ಷದ ಬಾಲಕಿಯ ಅತ್ಯಾಚಾರ ಎಸಗಿರುವ ಆರೋಪವಾಗಿತ್ತು ನಂತರ ಇವರು ತಲೆ ಮರಿಸಿಕೊಂಡಿದ್ದರು ಕೆಲ ದಿನಗಳ ನಂತರ ಇವರನ್ನು ಗುವಾಹಟಿಯಲ್ಲಿ ಪತ್ತೆ ಮಾಡಿ ಬಂಧಿಸಲಾಗಿತ್ತು.