Job Description: * ಪ್ರಸ್ತುತ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಇಂಡಿಯನ್ ಐಡಲ್ ವಿಜೇತ ಪವನ್ದೀಪ್ ರಾಜನ್ ಅವರನ್ನು ಉತ್ತರಾಖಂಡದ ಕಲೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಬ್ರ್ಯಾಂಡ್ ನ ರಾಯಭಾರಿಯಾಗಿ ಘೋಷಣೆ ಮಾಡಿದ್ದಾರೆ. * ಪವನ್ದೀಪ್ ಅವರು ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಉತ್ತರಾಖಂಡ ರಾಜ್ಯವನ್ನು ವಿಶ್ವದಲ್ಲಿ ಪ್ರಖ್ಯಾತಿಗೊಳಿಸಿದ್ದಾರೆ. * ಪವನ್ದೀಪ್ ರಾಜನ್ ಅವರು ಇಂಡಿಯನ್ ಐಡಲ್ ರಿಯಾಲಿಟಿ ಶೋ ಸ್ಪರ್ಧೆಯ 12 ನೇ ಆವೃತ್ತಿಯ ವಿಜೇತರಾಗಿದ್ದಾರೆ, ಈ ಕಾರ್ಯಕ್ರಮವು ಇದೇ ಆಗಸ್ಟ್ 15 ರಂದು ಮುಕ್ತಾಯವಾಗಿದೆ.