Job Description: * ಪ್ರಸ್ತುತ ವಿಶ್ವದಲ್ಲೇ ತಯಾರಿಕಾ ವಲಯದಲ್ಲಿ ಭಾರತಕ್ಕೆ 2 ನೇ ಸ್ಥಾನವನ್ನು ಪಡೆದುಕೊಂಡಿದೆ, ವಿಶ್ವದ ದೊಡ್ಡಣ್ಣವಾಗಿರುವ ಅಮೇರಿಕ ದೇಶವನ್ನು ಇದೀಗ ಭಾರತ ದೇಶವು ಹಿಂದಿಕ್ಕಿದೆ. * ಅಮೇರಿಕ ದೇಶವು 3 ನೇ ಸ್ಥಾನವನ್ನು ಪಡೆದಿದೆ. * ಪ್ರಸ್ತುತ ಚೀನಾ ದೇಶವು ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. * ಈ ವರದಿಯನ್ನು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಸಂಸ್ಥೆ 'ಕುಶ್ಮನ್ ಆಯಂಡ್ ವೇಕ್ಫೀಲ್ಡ್' ಸಿದ್ಧಪಡಿಸಿದೆ. * ಈ ಸಂಸ್ಥೆಯು ಯೂರೋಪ್, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಏಷ್ಯಾ-ಫೆಸಿಫಿಕ್ ಪ್ರದೇಶದ 47 ದೇಶಗಳನ್ನು ಈ ಸಮೀಕ್ಷೆಯಲ್ಲಿ ಪರಿಗಣಿಸಿದೆ, ಅದರಲ್ಲಿ ಭಾರತವು 2 ನೇ ಸ್ಥಾನವನ್ನು ಪಡೆದುಕೊಂಡಿದೆ. * ಪ್ರಸ್ತುತ ತಯಾರಿಕಾ ವಲಯದ ಉದ್ದಿಮೆಗಳು ಭಾರತದ ಕಡೆಗೆ ಹೆಚ್ಚು ಆಸಕ್ತಿ ನೀಡುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.