Job Description: * ಡಾ.ಗೇಲ್ ಒಂವೆಡ್ತ್ ಅವರು ತಮ್ಮ 81 ನೇ ವರ್ಷ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ವಿಧಿವಶರಾಗಿದ್ದಾರೆ. * ಡಾ.ಗೇಲ್ ಒಂವೆಡ್ತ್ ಅವರು ಖ್ಯಾತ ಸಂಶೋಧಕಿ ಮತ್ತು ಶ್ರಮಿಕ್ ಮುಕ್ತಿ ದಳದ ಸಹ ಸಂಸ್ಥಾಪಕಿ ಯಾಗಿದ್ದರು. * ಡಾ.ಗೇಲ್ ಒಂವೆಡ್ತ್ ಮೂಲತಃ ಅಮೇರಿಕದವರು, ಇವರು ತಮ್ಮ ಸಂಶೋಧನೆಯ ಸಮಯದಲ್ಲಿ ಪಶ್ಚಿಮ ಭಾರತದಲ್ಲಿನ ಬ್ರಾಹ್ಮಣೇತರ ಚಳವಳಿ ಬಗ್ಗೆ ಪ್ರಬಂಧ ರಚನೆ ಮಾಡಿದ್ದರು, ಹಾಗೂ 25 ಕ್ಕೂ ಅಧಿಕ ಪುಸ್ತಕಗಳನ್ನು ರಚಿಸಿದ್ದಾರೆ, ಶ್ರಮಿಕ ಮುಕ್ತಿ ದಳದ ಸಹ ಸಂಸ್ಥಾಪಕರು ಕೂಡ ಆಗಿದ್ದರು, ಹಾಗೂ ಇವರು ತಮ್ಮ ಬದುಕನ್ನು ದಮನಿತ ಸಮುದಾಯಗಳ ಅಧ್ಯಯನ ಸಲುವಾಗಿ ಮೀಸಲಿಟ್ಟದ್ದರು. * 1983 ರಲ್ಲಿ ಡಾ.ಗೇಲ್ ಒಂವೆಡ್ತ್ ಭಾರತದ ಪೌರತ್ವವನ್ನು ಪಡೆದುಕೊಂಡಿದ್ದಾರೆ. * ಡಾ.ಗೇಲ್ ಒಂವೆಡ್ತ್ ನಿಧನಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಂಬನಿ ಮಿಡಿದಿದ್ದಾರೆ.