Job Description: * ಪ್ರಸ್ತುತ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ರಾಷ್ಟ್ರಗಳು ದೂರ ಸಂವೇದಿ ಉಪಗ್ರಹ ಅಂಕಿಅಂಶ ಹಂಚಿಕೆಯ ಸಹಕಾರ ಒಪ್ಪಂದಕ್ಕೆ ಬ್ರಿಕ್ಸ್ ರಾಷ್ಟ್ರಗಳ ಅಧಿಕಾರಿಗಳ ಸಮ್ಮುಖದಲ್ಲಿ ಸಹಿ ಹಾಕಲಾಗಿದೆ ಎಂದು ಇಸ್ರೊ ತಿಳಿಸಿದೆ. * ಬ್ರಿಕ್ಸ್ ಬಾಹ್ಯಾಕಾಶ ಏಜೆನ್ಸಿಗಳ ನಿರ್ದಿಷ್ಟ ದೂರದ ಸಂವೇದಕ ಉಪಗ್ರಹಗಳ ವಾಸ್ತವ ನಕ್ಷತ್ರಪುಂಜವನ್ನು ನಿರ್ಮಾಣ ಮಾಡುವದು ಹಾಗೂ ಅವುಗಳಿಗೆ ಸಂಬಂಧಪಟ್ಟ ಭೂ ಕೇಂದ್ರಗಳ ಅಂಕಿಅಂಶಗಳನ್ನು ಸಂಗ್ರಹಿಸಲು ನೆರವಾಗುತ್ತೆ ಎಂದು ಇಸ್ರೊ(ISRO) ತಿಳಿಸಿದೆ. * ಬ್ರಿಕ್ಸ್ ಸಹಕಾರ ಒಪ್ಪಂದದ ಸಮಯದಲ್ಲಿ ಭಾರತೀಯ ಇಸ್ರೋ ಅಧ್ಯಕ್ಷ ಕೆ. ಶಿವನ್, ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತಾಧಿಕಾರಿ, ಜಾಂಗ್ ಕೆಜಿಯಾನ್, ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬ್ರೆಜಿಲಿಯನ್ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ವಲನಾಥನ್ ಮುನ್ಸಾಮಿ, ಕಾರ್ಲೋಸ್ ಅಗಸ್ಟೊ ಟೀಕ್ಸೀರಾ ಡಿ ಮೌರಾ ಹಾಗೂ ನಿರ್ದೇಶಕ ಜನರಲ್ ಆಫ್ ಸ್ಟೇಟ್ ಸ್ಪೇಸ್ ಕಾರ್ಪೊರೇಶನ್ ರೋಸ್ಕೋಸ್ಮೋಸ್, ಡಿಮಿಟ್ರಿ ರೋಗೋಜಿನ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.