Job Description: * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯು ಭಾರತೀಯ ಯುದ್ಧ ವಿಮಾನಗಳನ್ನು ರೆಡಾರ್ ಅಪಾಯದಿಂದ ರಕ್ಷಿಸಲು ಸುಧಾರಿತ ಚಾಫ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದೆ. * ರಾಜಸ್ಥಾನ್ ರಾಜ್ಯದ ಜೋಧ್ಪುರ ನಗರದ ರಕ್ಷಣಾ ಪ್ರಯೋಗಾಲಯ, DRDO ನ ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ ಸಹಯೋಗದಿಂದ ಸುಧಾರಿತ ಚಾಫ್ ಮೆಟೀರಿಯಲ್ ಮತ್ತು ಚಾಫ್ ಕಾರ್ಟ್ರಿಡ್ಜ್ -118/ಐ ಅಭಿವೃದ್ಧಿಪಡಿಸಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಭಾರತೀಯ ವಾಯುಪಡೆಯು ಯಶಸ್ವಿ ಬಳಕೆಯ ಪ್ರಯೋಗಗಳನ್ನು ಪೂರ್ಣಗೊಂಡ ಬಳಿಕ ಈ ತಂತ್ರಜ್ಞಾನವನ್ನು ಪರಿಚಯಿಸುವದಾಗಿ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ DRDO ತಿಳಿಸಿದೆ. * ಈ ಸುಧಾರಿತ ತಂತ್ರಜ್ಞಾನವು ರೆಡಾರ್ ಬೆದರಿಕೆಯಿಂದ ವಿಮಾನಗಳನ್ನು ರಕ್ಷಣೆ ಮಾಡುತ್ತದೆ, ಹಾಗೂ ಇನ್ಫ್ರಾ-ರೆಡ್ ಮತ್ತು ರೇಡಾರ್ ಬೆದರಿಕೆಗಳ ವಿರುದ್ಧ ನಿಷ್ಕ್ರಿಯ ಜ್ಯಾಮಿಂಗ್'ನ್ನು ಒದಗಿಸಲಿದೆ, ಹಾಗೂ ಇದು ಚಾಫ್ ಯುದ್ಧ ವಿಮಾನವನ್ನು ಪ್ರತಿಕೂಲ ರೆಡಾರ್ ಬೆದರಿಕೆಗಳಿಂದ ರಕ್ಷಣೆ ಮಾಡಿಕೊಳ್ಳಲು ಬಳಸುವ ರಕ್ಷಣಾ ತಂತ್ರಜ್ಞಾನವಾಗಿದೆ ಎಂದು DRDO ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.