Job Description: * ಪ್ರಸ್ತುತ ಅಫ್ಗಾನಿಸ್ತಾನಿನ ಕಾಬೂಲ್ ನಲ್ಲಿ ತಾಲಿಬಾನ್ಗಳು ವಿಶ್ವದ ಅಹಂಕಾರಿ ಶಕ್ತಿಯ ರಾಷ್ಟ್ರವಾದ ಅಮೇರಿಕದ ವಿರುದ್ಧ ಜಯಸಾಧಿಸಿದ್ದೇವೆ ಎಂದು ತಾವೇ ಘೋಷಣೆ ಮಾಡಿಕೊಂಡಿದ್ದಾರೆ, ಅಲ್ಲದೇ ಈ ಗೆಲುವನ್ನು ಅವರು ಅಫ್ಗಾನಿಸ್ತಾನದ ಸ್ವಾತಂತ್ರ್ಯ ದಿನವನ್ನಾಗಿ ಆಚರಣೆ ಮಾಡಿದ್ದಾರೆ. * ಪ್ರಸ್ತುತ 1919 ರ ಆಗಸ್ಟ್. 19 ಅಫ್ಗಾನಿಸ್ತಾನ ರಾಷ್ಟ್ರವು ಸ್ವಾತಂತ್ರ್ಯ ಪಡೆದ ದಿನವಾಗಿದೆ, ಇದರಿಂದಾಗಿ ಕಾಬೂಲ್ ಮತ್ತು ವಿವಿಧ ಪ್ರದೇಶದಲ್ಲಿ ನಾಗರಿಕರು ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಣೆ ಮಾಡಿದ್ದಾರೆ. * ತಾಲಿಬಾನಿಗಳು ಇತ್ತೀಚಿಗೆ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 'ತಾವು ಶರಿಯತ್ ಅಥವಾ ಇಸ್ಲಾಮಿಕ್ ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರ ನಡೆಸುತ್ತೇವೆ' ಎಂದು ತಿಳಿಸಿದ್ದಾರೆ.