Job Description: * ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸರ್ಕಾರವು ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ ಅಡಿಯಲ್ಲಿ ಸ್ಮಾರ್ಟ್ ಆರೋಗ್ಯ ಕಾರ್ಡ್ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. * ಈ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ: ರಾಜ್ಯದ 96 ಲಕ್ಷ ಕುಟುಂಬಗಳಲ್ಲಿ 3.5 ಕೋಟಿ ಜನರಿಗೆ ಸ್ಮಾರ್ಟ್ ಹೆಲ್ತ್ ಕಾರ್ಡ್ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ ಸ್ಮಾರ್ಟ್ ಹೆಲ್ತ್ ಕಾರ್ಡ್ಗಳನ್ನು ರಾಷ್ಟ್ರೀಯ ಮತ್ತು ರಾಜ್ಯ ಆಹಾರ ಭದ್ರತೆ ಯೋಜನೆಗಳು ಮತ್ತು ಅನ್ನಪೂರ್ಣ ಹಾಗೂ ಅಂತ್ಯೋದಯ ಉಪಕ್ರಮಗಳ ಫಲಾನುಭವಿಗಳಿಗೆ ನೀಡಲಾಗುತ್ತದೆ. * ಪ್ರಸ್ತುತ ಈ ಕಾರ್ಡ್ ನ ಅಡಿಯಲ್ಲಿ ಮಹಿಳೆಯರು ವರ್ಷಕ್ಕೆ 10 ಲಕ್ಷದವರೆಗೆ ಚಿಕಿತ್ಸೆಯನ್ನು ಪಡೆಯಬಹುದು, ಹಾಗೂ ಇನ್ನಉಳಿದ ಕುಟುಂಬದ ಸದಸ್ಯರು ತಲಾ 5 ಲಕ್ಷ ರೂ.ಗಳ ಲಾಭವನ್ನು ಪಡೆಯಬಹುದಾಗಿದೆ. * ಪ್ರಸ್ತುತ ಸ್ಮಾರ್ಟ್ ಹೆಲ್ತ್ ಕಾರ್ಡ್ಗಳನ್ನು ಒದಗಿಸಿದ ಭಾರತದ ಮೊದಲ ರಾಜ್ಯ ಒಡಿಶಾ ವಾಗಲಿದೆ ಎಂದಿದ್ದಾರೆ. * ಆರೋಗ್ಯ ಕಾರ್ಡ್ ಪಡೆದವರು ಒಡಿಶಾ ಹಾಗೂ ಭಾರತದ 200 ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ ಎಂದಿದ್ದಾರೆ. * ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಯೋಜನೆಯಾಗಿದೆ, ಸರಿ ಸುಮಾರು 70 ಲಕ್ಷ ಕುಟುಂಬಗಳು ಈ ಯೋಜನೆ ಅಡಿಯಲ್ಲಿವೆ, ಈ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ಮತ್ತು ಪ್ರತಿ ಕುಟುಂಬದ 7 ಸದಸ್ಯರಿಗೆ 7 ಲಕ್ಷಗಳ ಆರೋಗ್ಯ ರಕ್ಷಣೆಯನ್ನು ನೀಡಲಾಗುತ್ತದೆ ಎಂದು ಒಡಿಶಾ ಮುಖ್ಯಮಂತ್ರಿ ತಿಳಿಸಿದ್ದಾರೆ.