Job Description: * ಅಸ್ಸಾಂ ರಾಜ್ಯ ವಿಧಾನಸಭೆ 2021 ರ ಆಗಸ್ಟ್. 13 ರಂದು 'ಅಸ್ಸಾಂ ಜಾನುವಾರು ಸಂರಕ್ಷಣೆ ಮಸೂದೆ, 2021 ಯನ್ನು ಅಂಗೀಕರಿಸಿದೆ. * ಅಸ್ಸಾಂ ಜಾನುವಾರು ಸಂರಕ್ಷಣಾ ವಿಧೇಯಕ, 2021 ರ ಅನುಸಾರವಾಗಿ ದನದ ಮಾಂಸ ತಿನ್ನುವ ಸಮುದಾಯಗಳು ವಾಸಿಸುವ ಪ್ರದೇಶಗಳಲ್ಲಿ ಗೋಮಾಂಸ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸಲಾಗುತ್ತದೆ ಎಂದು ತಿಳಿಸಿದೆ. * ಪ್ರಸ್ತುತ ದೇವಸ್ಥಾನ ಅಥವಾ ಮಠದ ಸುತ್ತಮುತ್ತ 5 ಕಿಮೀ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಿದೆ. * ಈ ಮಸೂದೆಯು ಅಸ್ಸಾಂ ಜಾನುವಾರು ಸಂರಕ್ಷಣಾ 1950 ರ ಕಾಯಿದೆಯನ್ನು ರದ್ದುಪಡಿಸಿದೆ, ಇದರಿಂದಾಗಿ ಜಾನುವಾರುಗಳ ವಧೆ, ಬಳಕೆ, ಅಕ್ರಮ ಸಾಗಣೆಯನ್ನು ನಿಯಂತ್ರಿಸುವ ಗುರಿಯನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಒಡಿಶಾ ರಾಜ್ಯದ ಈ ಹೊಸ ಕಾನೂನನ್ನು ಪಾಲಿಸದಿದ್ದಲ್ಲಿ ಅಥವಾ ಮೀರಿದರೆ ಅಂತವರಿಗೆ ಕನಿಷ್ಠ '3' ರಿಂದ '8' ವರ್ಷಗಳ ಜೈಲು ಶಿಕ್ಷೆಗೆ ಒಳಪಡಿಸಲಾಗುತ್ತದೆ, ಹಾಗೂ '3' ರಿಂದ '5'ಲಕ್ಷ ರೂ. ದಂಡ ವಿಧಿಸಲಾಗುವದು ಎಂದು ತಿಳಿಸಿದ್ದಾರೆ. * ಆದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಕಾನೂನನ್ನು ಅನ್ವಯಿಸಲಾಗುವುದಿಲ್ಲ, ಆ ಸಂದರ್ಭಗಳಲ್ಲಿ, ಹಸು ಮತ್ತು ಕರು ಹೊರತುಪಡಿಸಿ ಉಳಿದ ಜಾನುವಾರುಗಳ ವಧೆಗೆ ಅನುಮತಿ ನೀಡಲಾಗಿದೆ.