Job Description: * ಪ್ರಸ್ತುತ ಈ ಹಿಂದೆ ತಮಿಳುನಾಡು ರಾಜ್ಯ ಡಿಎಂಕೆ ಸರ್ಕಾರವು ಚುನಾವಣೆ ಸಮಯದಲ್ಲಿ ವಿವಿಧ ಜಾತಿಗಳ ಅರ್ಚಕರ ನೇಮಕ ಮಾಡುವ ಭರವಸೆಯನ್ನು ನೀಡಿತ್ತು, ಇದೀಗ ಅದರಂತೆ ರಾಜ್ಯದ ದೇವಸ್ಥಾನಗಳಿಗೆ ವಿವಿಧ ಜಾತಿಗಳ 24 ಅರ್ಚಕರನ್ನು ನೇಮಕ ಮಾಡಿದೆ. * ತಮಿಳನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 75 ಅರ್ಚಕರಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವತಿಯಿಂದ ನೇಮಕಾತಿ ಆದೇಶಗಳನ್ನು ನೀಡಿದ್ದಾರೆ. * ಈ 24 ಮಂದಿ ಅರ್ಚಕರು ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಲು ಸರ್ಕಾರದ ವತಿಯಿಂದ ನೀಡಲಾದ ತರಬೇತಿ ಪೂರ್ಣಗೊಂಡ ಹಿನ್ನಲೆಯಿಂದ ನೇಮಕವಾಗಿದ್ದರೆ, ಇನ್ನು 34 ಮಂದಿ ಬೇರೆ ಬೇರೆ ಪಾಠಶಾಲೆಗಳಲ್ಲಿ ಅರ್ಚಕ ತರಬೇತಿಯನ್ನು ಪಡೆದಿದ್ದಾರೆ. * ಪ್ರಸ್ತುತ ತಮಿಳನಾಡು ರಾಜ್ಯದ 208 ನೇಮಕಾತಿಗಳಲ್ಲಿ ಭಟ್ಟಾಚಾರ್ಯರು, ಒಡುವರು, ಪೂಜಾರಿಗಳು, ತಾಂತ್ರಿಕ ಮತ್ತು ಕಚೇರಿ ಸಹಾಯಕರು ಸೂಕ್ತ ತರಬೇತಿಯನ್ನು ಪಡೆದ ನಂತರ ನೇಮಕಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸರ್ಕಾರ ತಿಳಿಸಿದೆ.