Job Description: * ಪ್ರಸ್ತುತ ಭಾರತ ದೇಶವು 1947 ರ ಆಗಸ್ಟ್ 15 ರಂದು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದು 75 ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ, ಇದೇ ಆಗಸ್ಟ್ 15 ರಂದು ಇನ್ನು ಹಲವು ರಾಷ್ಟ್ರಗಳು ಸ್ವತಂತ್ರ್ಯವನ್ನು ಪಡೆದುಕೊಂಡಿವೆ. * ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆದ ದೇಶಗಳು: ಭಾರತ, ಬಹ್ರೇನ್, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮತ್ತು ಲಿಚ್ಟೆನ್ಸ್ಟೈನ್, ದಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶಗಳು 'ರಾಷ್ಟ್ರೀಯ ದಿನ'ವನ್ನು ಆಚರಿಸಿಕೊಳ್ಳುತ್ತವೆ. * ಬಹ್ರೇನ್ ದೇಶವು: ಬ್ರಿಟೀಷರ ಆಡಳಿತಕ್ಕೆ ಒಳಪಟ್ಟ ದೇಶವಾಗಿದೆ, ಈ ದೇಶವು 1971 ಆಗಸ್ಟ್ 15 ರಂದು ಸಂಪೂರ್ಣ ಸ್ವತಂತ್ರ್ಯ ದೇಶವಾಗಿ ಘೋಷಿಸಿಕೊಂಡಿದೆ, ಆದರೆ ಈ ದೇಶವು ಆಗಸ್ಟ್. 15 ರಂದು ಆಚರಣೆ ಮಾಡುವುದಿಲ್ಲ, ಅದರ ಬದಲಾಗಿ ಡಿಸೆಂಬರ್ 16 ರಂದು ಆಚರಣೆ ಮಾಡಿಕೊಳ್ಳುತ್ತದೆ. * ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ: 2ನೇ ಮಹಾಯುದ್ದದ ಕೊನೆಯ ಸಂಧರ್ಭದಲ್ಲಿ ಆಗಸ್ಟ್. 15 ರಂದು ಜಪಾನ ದೇಶದಿಂದ ಸ್ವಾತಂತ್ರ್ಯಗೊಂಡ ಈ ದಿನವನ್ನು 'ಕೊರಿಯಾ ರಾಷ್ಟ್ರೀಯ ವಿಮೋಚನಾ ದಿನ' ಎಂದು ಘೋಷಣೆ ಮಾಡಿಕೊಂಡಿವೆ. * ಲಿಚ್ಟೆನ್ಸ್ಟೈನ್: ಈ ದೇಶವು ಆಸ್ಟ್ರಿಯಾ ಹಾಗೂ ಸ್ವಿಜರ್ಲೆಂಡ್ ದೇಶದ ನಡುವೆ ಇದೆ. ಈ ದೇಶ ಕೂಡ ಆಗಸ್ಟ್ 15 ಕ್ಕೆ ರಾಷ್ಟ್ರೀಯ ದಿನ ಘೋಷಿಸಿಕೊಂಡಿದೆ, ಈ ದೇಶದ ಹೆಸರು ಜರ್ಮನ್ ಭಾಷೆಯ ಒಂದು ಪದವಾಗಿದೆ. * ರಿಪಬ್ಲಿಕ್ ಆಫ್ ಕಾಂಗೋ: ಈ ದೇಶವು ಆಫ್ರಿಕಾ ಖಂಡದ ಮಧ್ಯ ಭಾಗದಲ್ಲಿದೆ, ಈ ಮೊದಲು ದೇಶವು 1880 ರಲ್ಲಿ ಫ್ರೆಂಚರ ಆಳ್ವಿಕೆಗೆ ಒಳಗಾಗಿತ್ತು, ನಂತರ 1960 ಆಗಸ್ಟ್.15 ರಂದು ಫ್ರೆಂಚ್ರಿಂದ ಸ್ವಾತಂತ್ರ್ಯ ಪಡೆದ ಕಾಂಗೋ ದೇಶವು ರಿಪಬ್ಲಿಕ್ ಆಫ್ ಕಾಂಗೋವಾಗಿ ಹೊರ ಹೊಮ್ಮಿದೆ.