Job Description: * ಪ್ರಧಾನಿ ನರೇಂದ್ರ ಮೋದಿ ಅವರು 75 ನೇ ಸ್ವಾತಂತ್ರ್ಯ ಸಂಭ್ರಮ ಹಿನ್ನಲೆಯಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದರು, ಹಾಗೂ ದೇಶದ ಜನತೆಯನ್ನುದ್ದೇಶಿಸಿ ಮಾಡನಾಡಿ, ಅದೇ ಸಂಧರ್ಭದಲ್ಲಿ ವಿವಿಧ ಘೋಷಣೆಗಳನ್ನು ಮಾಡಿದರು. * ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಣೆ: ದೇಶವು ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಅಗತ್ಯ ಅಭಿವೃದ್ಧಿ ಕಾಣುವುದು ದೊಡ್ಡ ಗುರಿಯಾಗಿದೆ ಎಂದು ಈ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಣೆ ಮಾಡಿದರು. * 2030 ಸಮಯಕ್ಕೆ ಭಾರತೀಯ ರೈಲ್ವೆಯಲ್ಲಿ ಶೂನ್ಯ ಮಾಲಿನ್ಯ ನಿರ್ಮಾಣ ಮಾಡಲು ಪಣ ತೊಡಲಾಗಿದೆ, ಹಾಗೂ ಭಾರತವನ್ನು ಹೈಡ್ರೋಜನ್ ರಫ್ತು ಮಾಡುವ ಹಬ್ ಮಾಡಲಾಗುತ್ತದೆ ಎಂದು ಮೋದಿ ಘೋಷಣೆ ಮಾಡಿದ್ದಾರೆ. * ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶ: ಪ್ರಸ್ತುತ ಎಲ್ಲಾ ಸೈನಿಕ ಶಾಲೆಗಳಲ್ಲಿಯೂ ಬಾಲಕಿ/ಯುವತಿಯರಿಗೆ ಪ್ರವೇಶ ಲಭ್ಯವಿರಲಿದೆ ಎಂದು ಘೋಷಣೆ ಮಾಡಿದರು. * ಇ-ಕಾಮರ್ಸ್ ಪ್ಲಾಟ್ಫಾರ್ಮ್ ಆರಂಭ: ಭಾರತ ಸರ್ಕಾರವು ಇ-ಕಾಮರ್ಸ್ ಪ್ಲಾಟ್ಫಾರ್ಮ್ ಶುರು ಮಾಡಲಿದೆ ಇದರಿಂದಾಗಿ ಹಳ್ಳಿಯ ಕರಕುಶಲಗಾರರಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. * 25 ವರ್ಷಗಳಲ್ಲಿ ನವ ಭಾರತ ನಿರ್ಮಾಣ: ಮುಂಬರುವ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಲಿದೆ ಆ ಸಮಯದಲ್ಲಿ ಭಾರತವು ಯಾವ ರಾಷ್ಟ್ರಕ್ಕೂ ನಾವು ಕಡಿಮೆ ಇಲ್ಲ ಎಂದು ತೋರಿಸಬೇಕು ಇದುವೇ ಭಾರತದ ನಿರ್ಮಾಣದ ಗುರಿ ಆಗಿರಬೇಕು ಎಂದು ತಿಳಿಸಿದರು. * ಪ್ರಧಾನಿ ಗತಿ ಶಕ್ತಿ ಯೋಜನೆ: ಪ್ರಧಾನಿ ಗತಿ ಶಕ್ತಿ ಯೋಜನೆಯನ್ನು ಆರಂಭಿಸಲಾಗುತ್ತದೆ, ಸುಮಾರು 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದಾಗಿದೆ, ಅಲ್ಲದೇ ಈ ಯೋಜನೆಯು ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವನ್ನು ನೀಡಲಿದೆ ಎಂದು ತಿಳಿಸಿದರು. * 75 ವಂದೇ ಭಾರತ್ ರೈಲು: ಭಾರತ ದೇಶವು 75 ನೇ ಸ್ವಾತಂತ್ರೋತ್ಸವದ 75 ವಾರಗಳ ಆಚರಣೆಗೆ ಪಣತೊಟ್ಟಿದೆ, 2021 ರ ಮಾರ್ಚ್ 12 ರಿಂದ 2023 ರ ಆಗಸ್ಟ್ 15 ರವರೆಗೂ 'ಅಮೃತ ಮಹೋತ್ಸವ' ನಡೆಯಲಿದೆ. * ಪ್ರಸ್ತುತ ಭಾರತೀಯ 75 ವಂದೇ ಭಾರತ್ ರೈಲುಗಳು ಸ್ವಾತಂತ್ರ್ಯದ ಅಮೃತ್ ಮಹೋತ್ಸವದ ಹಿನ್ನೆಲೆಯಿಂದಾಗಿ 75 ವಾರಗಳಲ್ಲಿ ಭಾರತದ ಎಲ್ಲ ಪರದೇಶಗಳಿಗೂ ಸಂಪರ್ಕ ಕಲ್ಪಿಸಲಿದೆ ಎಂದಿದ್ದಾರೆ. * ನಮ್ಮ ಗುರಿಯನ್ನು ತಲುಪಲು ಸಬ್ಕಾ ಸಾತ್ ಸಬ್ಕಾ ವಿಕಾಸ್- ಸಬ್ಕಾ ವಿಶ್ವಾಸ್ ಸಬ್ಕಾ ಪ್ರಯಾಸ್ ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.