Job Description: * ಭಾರತೀಯ ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಂದ್ ರವರು ಕ್ರಿಕೆಟಿಗೆ ವಿದಾಯ ಘೋಷಣೆ ಮಾಡಿದ್ದಾರೆ, ಹಾಗೂ ವಿದೇಶಿ ಲೀಗ್ಗಳಲ್ಲಿ ಆಡುವದೇ ಮುಂದಿನ ಗುರಿಯಾಗಿದೆ ಎಂದಿದ್ದಾರೆ. * 2012 ರ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಉನ್ಮುಕ್ತ್ ಚಂದ್ ಅವರು ಅಜೇಯ 111 ರನ್ ಕಲೆಹಾಕಿ ಭಾರತಕ್ಕೆ ಚಾಂಪಿಯನ್ ಪಟ್ಟವನ್ನು ತಂದು ಕೊಟ್ಟಿದ್ದಾರೆ. * ಉನ್ಮುಕ್ತ್ ಚಂದ್ ಅವರು 67 ಪ್ರಥಮ ದರ್ಜೆ ಪಂದ್ಯಗಳಲ್ಲಿ 3,379 ರನ್, 120 ಲಿಸ್ಟ್ ಎ ಪಂದ್ಯಗಳಲ್ಲಿ 4,505 ರನ್, ಟಿ20 ಕ್ರಿಕೆಟ್ನಲ್ಲಿ 1,565 ರನ್ ಬಾರಿಸಿದ ಇತಿಹಾಸ ಇವರದಿದೆ.