Job Description: * ವಿಶ್ವದಾದ್ಯಂತ ಆಗಸ್ಟ್.12 ರಂದು ವಿಶ್ವ ಆನೆ ದಿನವನ್ನು ಆಚರಣೆ ಮಾಡುತ್ತಾರೆ, ಈ ದಿನದಂದು ಆನೆಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಪರಿಸರ ವ್ಯವಸ್ಥೆಯಲ್ಲಿ ಆನೆಗಳ ಮಹತ್ವವನ್ನು ತಿಳಿಸಲು ಆಚರಿಸಲಾಗುತ್ತದೆ. * 2020'ರ ವಿಶ್ವ ಆನೆ ದಿನದ ಥೀಮ್ 'ಹಾಥಿ ಹಮಾರ ಸಾಥಿ', ಆದರೆ 2021'ರ ವಿಶ್ವ ಆನೆ ದಿನದ ಥೀಮ್ ಇನ್ನೂ ಘೋಷಣೆ ಮಾಡಿಲ್ಲ. * ಪ್ರಸ್ತುತ 2012ರ ಆಗಸ್ಟ್. 12ರಂದು ಮೊದಲ ವಿಶ್ವ ಆನೆ ದಿನವನ್ನು ಆಚರಿಸಲಾಗಿದೆ, ಈ ದಿನವು ಏಷ್ಯನ್ ಹಾಗೂ ಆಫ್ರಿಕನ್ ಆನೆಗಳ ದುರವಸ್ಥೆಯನ್ನು ತೋರಿಸಿದೆ. *ಪ್ರಸ್ತುತ ಕೆನಡಾದ ಚಲನಚಿತ್ರ ನಿರ್ಮಾಪಕ ಪೆಟ್ರೀಷಿಯಾ ಸಿಮ್'ನ ದತ್ತಿ ಸಂಸ್ಥೆ 'ವರ್ಲ್ಡ್ ಎಲಿಫೆಂಟ್ ಸೊಸೈಟಿ' ಹಲವಾರು ಜನರಿಗೆ ಶಿಕ್ಷಣವನ್ನು ನೀಡಿ ಆನೆ ರಕ್ಷಣೆಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಿದೆ, ಪ್ರಸ್ತುತ ಈ ಸೊಸೈಟಿಯು 100 ಆನೆ ಸಂರಕ್ಷಣಾ ಸಂಸ್ಥೆಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ. * ವರ್ಲ್ಡ್-ವೈಡ್ ಫಂಡ್ ಫಾರ್ ನೇಚರ್ (WWF)ನ ಪ್ರಕಾರ ಸರಿಸುಮಾರು 440,000 ಆನೆಗಳು ಭೂಮಿಯ ಮೇಲೆ ಬದಿಕಿವೆ ಎಂದು ತಿಳಿಸಿದೆ.