Job Description: * ಪಾಕಿಸ್ತಾನ ದೇಶವು 2021ರ ಆಗಸ್ಟ್. 12ರಂದು ಮೇಲ್ಮೈಯಿಂದ ಮೇಲ್ಮೈಗೆ ಪರಮಾಣು ಸಾಮರ್ಥ್ಯದ ಘಜ್ನವಿ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ತರಬೇತಿ ಉಡಾವಣೆಯನ್ನು ನಡೆಸಿದೆ. * ಪ್ರಸ್ತುತ ಪಾಕಿಸ್ತಾನ ಸೇನೆಯ ಕಾರ್ಯತಂತ್ರದ ಪಡೆಯ ಕಮಾಂಡ್ ಕಾರ್ಯಾಚರಣೆಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಈ ತರಬೇತಿ ಆರಂಭಿಸಿದೆ. * ಪಾಕಿಸ್ತಾನದ ಈ ಘಜ್ನವಿ ಕ್ಷಿಪಣಿಯು ಸುಮಾರು 290 ಕೀ. ಮೀ. ವ್ಯಾಪ್ತಿಯವರೆಗೆ ವಿವಿಧ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ, ಹಾಗೂ ಈ ಕ್ಷಿಪಣಿಯನ್ನು ಹಗಲು ಮತ್ತು ರಾತ್ರಿ ಎರಡು ವಿಧಾನಗಳಲ್ಲಿ ಪರೀಕ್ಷಿಸಲಾಗಿದೆ. * ಈ ಘಜ್ನವಿ ಕ್ಷಿಪಣಿಯು ಹೈಪರ್ಸಾನಿಕ್ ಮೇಲ್ಮೈಯಿಂದ ಮೇಲ್ಮೈಗೆ ಕಡಿಮೆ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ, ಇದನ್ನು ಪಾಕಿಸ್ತಾನ ರಾಷ್ಟ್ರೀಯ ಅಭಿವೃದ್ಧಿ ಸಂಕೀರ್ಣದಿಂದ ಅಭಿವೃದ್ಧಿಪಡಿಸಲಾಗಿದೆ, ಅಲ್ಲದೆ ಇದಕ್ಕೆ 11ನೇ ಶತಮಾನದ ಮುಸ್ಲಿಂ ತುರ್ಕಿಕ್ ವಿಜಯಶಾಲಿಯಾದ ಘಜ್ನವಿಯ ಹೆಸರನ್ನು ಇಡಲಾಗಿದೆ, ಇದನ್ನು 2012'ರಲ್ಲಿ ಪಾಕಿಸ್ತಾನ ಸೇನೆಯ ಸೇವೆಗೆ ಸೇರ್ಪಡೆಯಾಗಿದೆ.