Job Description: * ಇಂಡೊನೇಷ್ಯಾದ ಸೇನೆಗೆ ಹೊಸದಾಗಿ ಸೇವೆಗೆ ಸೇರಿಕೊಳ್ಳುವ ಮಹಿಳಾ ಸೈನಿಕರಿಗೆ ಕಡ್ಡಾಯ ಕನ್ಯತ್ವ ಪರೀಕ್ಷೆಯನ್ನು ನಡೆಸುತ್ತಿದ್ದರು, ಇದೀಗ ಈ ಪರೀಕ್ಷೆಯನ್ನು ರದ್ದು ಪಡಿಸಿದ್ದಾರೆ, ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಸ್ವಾಗತಿಸಿದೆ. * ಸುಮಾರು 7 ವರ್ಷಗಳ ಹಿಂದೆ ಕನ್ಯತ್ವ ಪರೀಕ್ಷೆಗೆ ವೈಜ್ಞಾನಿಕ ಆಧಾರವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿತ್ತು, ಆದರು ಇಂಡೊನೇಷ್ಯಾ ಸೇನೆಯು ತನ್ನ ಮಹಿಳಾ ಸೈನಿಕರಿಗೆ ಕನ್ಯತ್ವ ಪರೀಕ್ಷೆಯನ್ನು ನಡೆಸುತ್ತಿತ್ತು, ಇದೀಗ ಈ ಪರೀಕ್ಷೆಯನ್ನು ರದ್ದು ಪಡಿಸಿದ್ದಾರೆ ಎಂದು ಸೇನಾ ಮುಖ್ಯಸ್ಥ ಅಂದಿಕಾ ಪೆರ್ಕಸಾ ಮಾಧ್ಯಮದ ಮುಂದೆ ಮಾಹಿತಿಯನ್ನು ನೀಡಿದ್ದಾರೆ. * ಆದರೆ ಪ್ರಸ್ತುತ ಇಂಡೊನೇಷ್ಯಾದ ವಾಯುಪಡೆ ಹಾಗೂ ನೌಕಾಪಡೆಗಳಲ್ಲಿ ಇನ್ನು ಈ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತಿದೆ ಈ ಪಡೆಗಳಲ್ಲಿಯೂ ಕೂಡ ಕನ್ಯತ್ವ ಪರೀಕ್ಷೆಯನ್ನು ರದ್ದುಗೊಳಿಸಬೇಕಾಗಿದೆ ಎಂದಿದ್ದಾರೆ.