Job Description: * ಪ್ರಸ್ತುತ ನ್ಯೂಯಾರ್ಕ್'ನ ಸರಿ ಸುಮಾರು 233 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಹಿಳಾ ಗವರ್ನರ್ ಆಗಿ ಕ್ಯಾತಿ ಹೊಚುಲ್ ಆಯ್ಕೆಯಾಗಿದ್ದಾರೆ. * ಈ ಹಿಂದಿನ ಗವರ್ನರ್'ಆಗಿದ್ದ ಆಂಡ್ರ್ಯೂ ಕ್ಯುಮೊ ಅವರು ತಮ್ಮ ಕಚೇರಿಯ '11' ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕಳ ನೀಡಿರುವ ಆರೋಪದ ಹಿನ್ನಲೆಯಿಂದ ರಾಜೀನಾಮೆ ನೀಡಿದ್ದಾರೆ, ಇದೀಗ ಇವರ ಸ್ಥಾನಕ್ಕೆ ಲೆಫ್ಟಿನೆಂಟ್ ಗವರ್ನರ್ ಕ್ಯಾತಿಯನ್ನು ಅವರನ್ನು ಆಯ್ಕೆಮಾಡಲಾಗಿದೆ. * 'ಕ್ಯಾತಿ ಹೊಚುಲ್' ಅವರು ನ್ಯೂಯಾರ್ಕ್'ನ 57ನೇ ಗವರ್ನರ್ ಆಗಿ ಸೇವೆ ಸಲ್ಲಿಸಲು ಆರಂಭಿಸಿದ್ದಾರೆ. * 'ಕ್ಯಾತಿ ಹೊಚುಲ್' ಅವರು 2014 ಮತ್ತು 2018'ರ ಚುನಾವಣೆಯಲ್ಲಿ ಜಯಿಸಿ ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷತೆ ನಿರ್ವಹಿಸುತ್ತಿದ್ದರು, ಇದರ ಜೊತೆಯಲ್ಲಿ ಹೆರಾಯಿನ್ ಮತ್ತು ಒಪಿಯಾಡ್ ನಿಂದನೆಯನ್ನು ಎದುರಿಸುವ ಕಾರ್ಯಪಡೆಯ ಸಹ-ಅಧ್ಯಕ್ಷರಾಗಿದ್ದರು. * ಕ್ಯಾತಿ ಅವರು 2015'ರಲ್ಲಿ ಕಾಲೇಜು ಕ್ಯಾಂಪಸ್ಗಳಲ್ಲಿ ಆಗುವ ದೌರ್ಜನ್ಯವನ್ನು ಎದುರಿಸಲು 'ಇನಫ್ ಈಸ್ ಇನಫ್' ಎಂಬ ಅಭಿಯಾನವನ್ನು ಆರಂಭಿಸಿದ್ದರು.