Job Description: * ಭಾರತದ ಮೊದಲ ಇಂಟರ್ನೆಟ್ ಆಡಳಿತ ವೇದಿಕೆ (IIGF)ಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2021 ರ ಅಕ್ಟೋಬರ್. 20 ರಿಂದ 3 ದಿನಗಳ ಕಾಲ ನಡೆಸಲಿದೆ. * ಪ್ರಸ್ತುತ ಇಂಟರ್ನೆಟ್ ಗವರ್ನೆನ್ಸ್ ಫೋರಂ ಆರಂಭವನ್ನು ಅನಿಲ್ ಕುಮಾರ್ ಜೈನ್, ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. * ವಿದ್ಯಾರ್ಥಿಗಳು ಹಾಗೂ ಯುವಕರು ಅಕ್ಟೋಬರ್ ನಲ್ಲಿ ಆರಂಭವಾಗುವ ಮುಖ್ಯ ಸಮಾರಂಭದಲ್ಲಿ ಭಾಗವಹಿಸುವ ಉದ್ದೇಶದಿಂದ ಪೂರ್ವ ಕಾರ್ಯಕ್ರಮಗಳನ್ನು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. * IIGF ಎಂದರೆ ಇಂಟರ್ನೆಟ್ ಆಡಳಿತ ನೀತಿ ಚರ್ಚಾ ವೇದಿಕೆಯಾಗಿದೆ, ಹಾಗೂ ಇದು ವಿಶ್ವಸಂಸ್ಥೆಯ ಅಡಿಯಲ್ಲಿ ಇಂಟರ್ನೆಟ್ ಆಡಳಿತ ವೇದಿಕೆಯ ಭಾರತೀಯ ಆವೃತ್ತಿಯಾಗಿದೆ. * ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ IGF ನ್ನು ಸ್ಥಾಪಿಸಲು 2006 ರಲ್ಲಿ ಘೋಷಣೆ ಮಾಡಿದರು.