Job Description: * ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಭಾರತವು ಕೋ-ವಿನ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಕೋವಿಡ್ -19 ಲಸಿಕೆಯನ್ನು ಪಡೆಯಲು ಅವಕಾಶ ನೀಡಿದೆ. * ಪ್ರಸ್ತುತ ವಿದೇಶಿ ಪ್ರಜೆಗಳು ತಮ್ಮ ಪಾಸ್ಪೋರ್ಟ್'ನ್ನು ಗುರುತಿನ ದಾಖಲೆಯಾಗಿ ಬಳಸಿಕೊಂಡು ಕೋವಿನ್ ಪೋರ್ಟಲ್ನಲ್ಲಿ ಹೆಸರನ್ನು ನೋಂದಾಯಿಸಿ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದೆ. * ಭಾರತದಲ್ಲಿ 2021 ರ ಜನವರಿ. 16 ರಿಂದ ರಾಷ್ಟ್ರೀಯ ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ, ಭಾರತ ದೇಶವು ಇಲ್ಲಿಯವರೆಗೆ 51 ಕೋಟಿಗೂ ಅಧಿಕ ಲಸಿಕೆಯ ಪ್ರಮಾಣಗಳನ್ನು ನೀಡಿದೆ. * ಕೋವಿನ್ ಎಂದರೆ ಕೋವಿಡ್ -19 ಲಸಿಕೆಗಾಗಿ ನೋಂದಾಯಿಸಲು ಭಾರತ ಸರ್ಕಾರದ ತರೆದಿರುವ ವೆಬ್ ಪೋರ್ಟಲ್ ಆಗಿದೆ, ಈ ಪೋರ್ಟಲ್ ಡಿಜಿಟಲ್ ರೂಪದಲ್ಲಿ ಲಸಿಕೆ ಪ್ರಮಾಣಪತ್ರಗಳನ್ನು ನೀಡುತ್ತದೆ.