Job Description: * ಪ್ರಸ್ತುತ ಉತ್ತರ ಪ್ರದೇಶ ಸರ್ಕಾರವು 'ಕಾಕೋರಿ ರೈಲು ದರೋಡೆಯನ್ನು' ಎಂಬ ಸ್ವಾತಂತ್ರ್ಯ ಚಳುವಳಿಯನ್ನು 'ಕಾಕೋರಿ ಟ್ರೈನ್ ಆಕ್ಷನ್' ಎಂದು ಮರುನಾಮಕರಣ ಮಾಡಿದೆ, ಹಾಗೂ ಉತ್ತರ ಪ್ರದೇಶದ ಕಾಕೋರಿಯಲ್ಲಿ ರೈಲ ದರೋಡೆ ಮಾಡಿ ಗಲ್ಲಿಗೇರಿಸಲಾಗಿರುವ ಕ್ರಾಂತಿಕಾರಿಗಳಿಗೆ ಗೌರವ ನಮನಗಳನ್ನು ಸಲ್ಲಿಸಿದೆ. * ಈ ಹಿಂದೆ 1925 ರಲ್ಲಿ ಕ್ರಾಂತಿಕಾರಿಗಳು ಶಸ್ತ್ರಾಸ್ತ್ರಗಳನ್ನು ಖರೀದಿಸುವ ನಿಟ್ಟಿನಲ್ಲಿ ರೈಲನ್ನು ದರೋಡೆ ಮಾಡಿದ್ದರು, ಈ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಹೊರತು ಬೇರೆ ಯಾವುದೇ ಪಿತೂರಿಯನ್ನು ಮಾಡಿಲ್ಲವೆಂದು ಪರಿಗಣಿಸಿ ಹೆಸರನ್ನು ಬದಲಾಯಿಸಲಾಗಿದೆ ಎಂದಿದ್ದಾರೆ. * ಕಾಕೋರಿ ರೈಲು ಕ್ರಮವು : ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಅಂದರೆ 1925 ರ ಆಗಸ್ಟ್. 9 ರಂದು ಬ್ರಿಟಿಷ್ ರಾಜ್ ವಿರುದ್ಧ ಉತ್ತರ ಪ್ರದೇಶದ ಲಕ್ನೋ ಸಮೀಪದ ಕಾಕೋರಿ ಎಂಬ ಹಳ್ಳಿಯಲ್ಲಿ ನಡೆದ ರೈಲು ದರೋಡೆ ಇದಾಗಿದೆ, ಈ ದರೋಡೆಯನ್ನು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (HRA) ಆಯೋಜಿಸಿತ್ತು. * ಸ್ವಾತಂತ್ರ್ಯ ಪಡೆಯುವ ಉದ್ದೇಶದಿಂದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳನ್ನು ಕೈಗೊಳ್ಳಲು HRA ಯನ್ನು ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಕುಲ್ಲಾ ಖಾನ್ ಅವರು ಸ್ಥಾಪಿಸಿದ್ದಾರೆ. * ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಎಂಬುವದು ಕ್ರಾಂತಿಕಾರಿ ಸಂಘಟನೆಯಾಗಿದೆ, ಇದನ್ನು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (HRA) ಎಂದು ಕರೆಯುತ್ತಿದ್ದರು.