Job Description: * ಪ್ರಸ್ತುತ 2021 ರಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಭಾರತಕ್ಕೆ ತನ್ನ ಮೊದಲ N-ಲೈನ್ ಕಾರುಗಳನ್ನು ಬಿಡುಗಡೆ ಮಾಡುವದಾಗಿ ಘೋಷಿಸಿದೆ. * ಹ್ಯುಂಡೈ N ವಿಭಾಗವು ಡಿಸೆಂಬರ್ 2013 ರಲ್ಲಿ ಆರಂಭವಾಗಿದೆ, N ದಕ್ಷಿಣ ಕೊರಿಯಾದ ನಮ್ಯಂಗ್ R&D ಕೇಂದ್ರವನ್ನು ಸೂಚಿಸುತ್ತದೆ. * N-ಲೈನ್ ಮಾದರಿಗಳು ಗ್ರಾಹಕರಿಗೆ ಮೋಟಾರ್ ಸ್ಪೋರ್ಟ್ಸ್-ಪ್ರೇರಿತ ಸ್ಟೈಲಿಂಗ್ ಸೂಚನೆಗಳನ್ನು ನೀಡುತ್ತವೆ. ಇದು ಉತ್ಸಾಹ ಮತ್ತು ಕ್ರೀಡಾಸಕ್ತಿಯನ್ನು ಹುಟ್ಟುಹಾಕುತ್ತವೆ ಎಂದು ದಕ್ಷಿಣ ಕೊರಿಯಾದ ಕಾರು ತಯಾರಕರು ತಿಳಿಸಿದ್ದಾರೆ. * ಹ್ಯುಂಡೈ N-ಲೈನ್ ನ್ನು ಯುರೋಪ್, ದಕ್ಷಿಣ ಕೊರಿಯಾ, ಯುಎಸ್ ಹಾಗೂ ರಷ್ಯಾ ದೇಶಗಳಲ್ಲಿ ಮಾರಾಟ ಮಾಡುತ್ತಿದೆ. * ಎನ್-ಲೈನ್ ಎಂದರೇ ಪ್ರಪಂಚದಾದ್ಯಂತದ ವಾಹನ ತಯಾರಕರು ತಮ್ಮ ಉಪ-ಬ್ರಾಂಡ್ಗಳನ್ನು ಹೊಂದಿದ್ದಾರೆ, ಉದಾಹರಣೆಗೆ, ಬಿಎಂಡಬ್ಲ್ಯು(BMW) ಎಂ ಪರ್ಫಾರ್ಮೆನ್ಸ್ ವಿಭಾಗವನ್ನು ಹೊಂದಿದೆ, ಮರ್ಸಿಡಿಸ್ ಬೆಂಜ್ ಎಎಮ್ಜಿ ವಿಭಾಗ ಹೊಂದಿದೆ, ಅದೇ ರೀತಿಯಲ್ಲಿ ಹ್ಯುಂಡೈ ತನ್ನ ಎನ್-ಲೈನ್(N-LINE) ಹಾಗೂ N-ಬ್ಯಾಡ್ಜ್ಡ್ ಕಾರುಗಳನ್ನು ಬಿಡುಗಡೆಗೊಳಿಸಿದೆ. * ಹುಂಡೈ ಮೋಟಾರ್ ಕಂಪನಿಯು ದಕ್ಷಿಣ ಕೊರಿಯಾದ ಬಹುರಾಷ್ಟ್ರೀಯ ಆಟೋಮೋಟಿವ್ ತಯಾರಿಕೆ ಕಂಪನಿಯಾಗಿದೆ, ಹಾಗೂ ತನ್ನ ಪ್ರಧಾನ ಕಚೇರಿಯನ್ನು ಸಿಯೋಲ್ನಲ್ಲಿ ಹೊಂದಿದೆ. * ಹುಂಡೈ ಮೋಟಾರ್ ಕಂಪನಿಯುನ್ನು 1967 ರಲ್ಲಿ ಸ್ಥಾಪಿಸಲಾಗಿದೆ.