Job Description: * ಪ್ರಸ್ತುತ 2021 ರ ಆಗಸ್ಟ್.11 ರಂದು ದೆಹಲಿ ಸರ್ಕಾರವು ಮುಖರಹಿತ ಸಾರಿಗೆ ಸೇವೆಗಳನ್ನು ಆರಂಭಿಸಲಿದೆ, ಇದರಲ್ಲಿ ಎಲ್ಲಾ ಚಾಲನಾ ಪರವಾನಗಿಗಳು, ನೋಂದಣಿ ಹಾಗೂ ಪರವಾನಗಿಗೆ ಸಂಬಂಧಿಸಿದ ಸೇವೆಗಳನ್ನು ಆನ್ಲೈನ್ ಮೂಲಕ ತರಲಿದೆ ಎಂದು ಅರವಿಂದ ಕೇಜ್ರಿವಾಲ ತಿಳಿಸಿದ್ದಾರೆ. * ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ I.P ಯಲ್ಲಿ ನಡೆದ ಸಮಾರಂಭದಲ್ಲಿ 33 ಮುಖರಹಿತ ಸೇವೆಗಳನ್ನು ಆರಂಭಿಸಿದರು, ಹಾಗೂ IP ಎಸ್ಟೇಟ್, ಸರಾಯ್ ಕಾಲ್ ಖಾನ್, ಜನಕಪುರಿ ಹಾಗೂ ವಸಂತ ವಿಹಾರ್ ಎಂಬ '4' ವಲಯಗಳ ಕಚೇರಿಗಳನ್ನು ಸ್ಥಗಿತಗೊಳಿಸಲಾಗುವದು, ಹಾಗೂ ದಕ್ಷಿಣ ವಲಯದ ಮೋಟಾರು ಪರವಾನಗಿ (MLO) ಕಚೇರಿಗಳು ರಾಜಾ ಉದ್ಯಾನ ಹಾಗೂ ದ್ವಾರಕಾ ಕ್ರಮವಾಗಿ ತಮ್ಮ ವಾಹನ ಮತ್ತು ಸಾರಥಿ ಸಂಬಂಧಿತ ಕಾರ್ಯಗಳನ್ನು ನೋಡಿಕೊಳ್ಳುಲಿವೆ ಎಂದಿದ್ದಾರೆ. * ಮುಖ ರಹಿತ ಸಾರಿಗೆ ಸೇವೆಗಳು: ಡ್ರೈವಿಂಗ್ ಲೈಸೆನ್ಸ್ ನವೀಕರಣ, ಕಲಿಕಾ ಪರವಾನಗಿ, ಮಾಲೀಕತ್ವದ ವರ್ಗಾವಣೆ, ನಕಲಿ ನೋಂದಣಿ ಪ್ರಮಾಣಪತ್ರ, ಸರಕು ಮತ್ತು ಪ್ರಯಾಣಿಕ ವಾಹನಗಳಿಂದ ಹೊಸ ಅನುಮತಿ, ಅಂತರಾಷ್ಟ್ರೀಯ ಚಾಲನಾ ಪರವಾನಗಿ, ವಿಳಾಸ ಬದಲಾವಣೆ, ಹೀಗೆ ಹಲವು ಮುಖ ರಹಿತ ಸೇವೆಗಳನ್ನು ಒಳಗೊಂಡಿರಲಿದೆ ಎಂದು ತಿಳಿಸಿದ್ದಾರೆ.