Job Description: * ಪ್ರಸ್ತುತ ಭಾರತೀಯ ಸೇನೆಯ "ಮಿಷನ್ ಒಲಿಂಪಿಕ್ಸ್ ವಿಂಗ್" ಯೋಜನೆ ಅಡಿಯಲ್ಲಿ ಸುಮಾರು 450 ಕ್ಕೂ ಅಧಿಕ ಅಥ್ಲೀಟ್ಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಇತ್ತೀಚಿಗೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ ನ ಪುರುಷರ 'ಜಾವೆಲಿನ್ ಥ್ರೋ' ನಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ, ಪ್ರಸ್ತುತ ನೀರಜ್ ಚೋಪ್ರಾ 2016 ರ ಮೇ ತಿಂಗಳಲ್ಲಿ ಭಾರತೀಯ ಸೇನೆಗೆ ಸೇರಿಕೊಂಡಿದ್ದರು. * ಇದೀಗ ಭಾರತೀಯ ಸೇನೆಯು ಒಟ್ಟು 11 ಕ್ರೀಡೆಗಳಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಈ ಯೋಜನೆಯನ್ನು ತಂದಿದೆ. * ಭಾರತೀಯ ಸೇನೆಯು 'ಮಿಷನ್ ಒಲಿಂಪಿಕ್ಸ್ ವಿಂಗ್' ಯೋಜನೆಯಲ್ಲಿ '5' ವಿಭಾಗಗಳಿವೆ, ರೋಯಿಂಗ್, ಶೂಟಿಂಗ್, ಈಕ್ವೆಸ್ಟ್ರಿಯನ್, ಸೇಲಿಂಗ್ ಹಾಗೂ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ ಇವೆ. * ಪ್ರಸ್ತುತ ಭಾರತೀಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ (ASI) ನಲ್ಲಿ 200 ಕ್ಕೂ ಅಧಿಕ ಅಥ್ಲೀಟ್ಗಳಿಗೆ ಅಥ್ಲೆಟಿಕ್ಸ್, ಆರ್ಚರಿ, ಬಾಕ್ಸಿಂಗ್, ಕುಸ್ತಿ, ವೇಟ್ಲಿಫ್ಟಿಂಗ್, ಫೆನ್ಸಿಂಗ್ ಹಾಗೂ ಡೈವಿಂಗ್ ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಇತ್ತೀಚಿಗೆ ನಡೆದ ಟೋಕಿಯೊ ಒಲಿಂಪಿಕ್ಸ್ ನ ಕ್ರೀಡಾಕೂಟದಲ್ಲಿ ಭಾರತೀಯ ಸೇನೆಯ 16 ಯೋಧರು ಸ್ಪರ್ಧಿಸಿದ್ದರು.