Job Description: * ನವದೆಹಲಿಯ ಭಾರತದ ರಾಷ್ಟ್ರೀಯ ಆರ್ಕೈವ್ಸ್ನಲ್ಲಿ "ಕ್ವಿಟ್ ಇಂಡಿಯಾ ಚಳುವಳಿಯ 79 ನೇ ವಾರ್ಷಿಕೋತ್ಸವದ ಅಂಗವಾಗಿ, ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು 2021 ರ ಆಗಸ್ಟ್. 8 ರಂದು ಪ್ರದರ್ಶನವನ್ನು ಉದ್ಘಾಟಣೆ ಮಾಡಿದರು. * ಪ್ರಸ್ತುತ "ಆಜಾದಿ ಕಾ ಅಮೃತ್ ಮಹೋತ್ಸವ" ಉಪಕ್ರಮದ ಒಂದು ಭಾಗವಾಗಿ ಈ ಚಳುವಳಿಯ ಪ್ರದರ್ಶನವನ್ನು ಭಾರತದ ರಾಷ್ಟ್ರೀಯ ದಾಖಲೆಗಳಲ್ಲಿ ಸೇರಿಸಲಾಗಿದೆ. * ಈ ಕ್ವಿಟ್ ಇಂಡಿಯಾ ಚಳುವಳಿಯನ್ನು 1942 ರ ಆಗಸ್ಟ್. 8 ರಂದು ಮಹಾತ್ಮ ಗಾಂಧಿ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬಾಂಬೆ ಅಧಿವೇಶನದಲ್ಲಿ ಆರಂಭಿಸಿದರು, ಈ ಚಳುವಳಿಯನ್ನು ಆಗಸ್ಟ್ ಚಳುವಳಿ ಎಂದು ಕರೆಯುತ್ತಾರೆ. *ಈ ಚಳುವಳಿಯನ್ನು 2 ನೇ ಮಹಾಯುದ್ಧದ ಸಂಧರ್ಭದಲ್ಲಿ ಆರಂಭಿಸಲಾಯಿತು, ಹಾಗೂ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸುವಂತೆ ಒತ್ತಡ ಹೇರಲಾಯಿತು, ಆದರು ಬ್ರಿಟಿಷರು ಸ್ವಾತಂತ್ರ್ಯವನ್ನು ನೀಡಲು ನಿರಾಕರಿಸಿ, ಯುದ್ಧ ಮುಗಿದ ನಂತರ ಮಾತ್ರ ಸ್ವಾತಂತ್ರ್ಯವನ್ನು ನೀಡಬಹುದು ಎಂದು ತಿಳಿಸಿದ್ದರು.