Job Description: * ಇತ್ತೀಚಿಗೆ ನಡೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಅವರು 'ಜಾವೆಲಿನ್ ಥ್ರೋ' ನಲ್ಲಿ ಚಿನ್ನದ ಪದಕವನ್ನು ಜಯಿಸಿ ದಾಖಲೆಯನ್ನು ನಿರ್ಮಿಸಿದ್ದಾರೆ, ಈ ಕಾರಣದಿಂದಾಗಿ ಪ್ರತಿ ವರ್ಷವು ಆಗಸ್ಟ್. '7' ರಂದು ರಾಷ್ಟ್ರೀಯ ಜಾವೆಲಿನ್ ದಿನವೆಂದು ಆಚರಣೆ ಮಾಡಲು ಭಾರತ ಅಥ್ಲೆಟಿಕ್ಸ್ ಫೆಡರೇಶನ್ ಯೋಜನಾ ಆಯೋಗದ ಅಧ್ಯಕ್ಷ ಲಲಿತ್ ಭಾನೋಟ್ ಅವರು ತಿಳಿಸಿದ್ದಾರೆ. * ಪ್ರಸ್ತುತ ನೀರಜ್ ಚೋಪ್ರಾ ಅವರು ಈ 'ಜಾವೆಲಿನ್ ಥ್ರೋ' ಕ್ರೀಡಾಕೂಟದಲ್ಲಿ 87.58 ಮೀ. ಜಾವೆಲಿನ್ ಎಸೆದು ಮೊದಲ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ಜಾವೆಲಿನ್ ನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸಲಾಗುತ್ತದೆ, ಹಾಗೂ ಜಿಲ್ಲಾ ಮಟ್ಟಗಳಲ್ಲಿ ಜಾವೆಲಿನ್ ಸ್ಪರ್ಧೆ ಹಮ್ಮಿಕೊಂಡು ಎಲ್ಲಾ ಫೆಡರೇಷನ್ಗಳಿಗೂ ಅಗತ್ಯವಿರುವ ಜಾವೆಲಿನ್ ನ್ನು ಭಾರತ ಅಥ್ಲೆಟಿಕ್ಸ್ ಫೆಡರೇಶನ್ ನೀಡಲಿದೆ ಎಂದು ತಿಳಿಸಿದ್ದಾರೆ. * ಭಾರತ ಅಥ್ಲೆಟಿಕ್ಸ್ ಫೆಡರೇಶನ್ (AFI) 2018 ರಲ್ಲಿ ರಾಷ್ಟ್ರೀಯ ಜಾವೆಲಿನ್ ಥ್ರೋ ಚಾಂಪಿಯನ್ಷಿಪ್'ನ್ನು ಆರಂಭಿಸಿದೆ.