Job Description: * ಟೋಕಿಯೊ ಒಲಿಂಪಿಕ್ಸ್ ನ ಪುರುಷರ ಕುಸ್ತಿ ವಿಭಾಗದಲ್ಲಿ ಭಾರತದ ರವಿಕುಮಾರ್ ದಹಿಯಾ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಕುಸ್ತಿ ಪಟು ರವಿಕುಮಾರ್ ದಹಿಯಾ ಅವರು ಪುರುಷರ 57 KG ವಿಭಾಗದ ಫೈನಲ್ ನಲ್ಲಿ ವಿಶ್ವ ಚಾಂಪಿಯನ್ ರಷ್ಯಾದ ಜವೂರ್ ಉಗುವೆ ಅವರ ವಿರುದ್ಧ ಸೋಲು ಅನುಭವಿಸಿ ಚಿನ್ನ ಗೆಲ್ಲುವಲ್ಲಿ ವಿಫಲರಾಗಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. * ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುತ್ತಿರುವ ಭಾರತದ 5 ನೇ ಕುಸ್ತಿಪಟು ಇವರಾಗಿದ್ದಾರೆ. * ಒಲಿಂಪಿಕ್ಸ್ ಕುಸ್ತಿಯಲ್ಲಿ ಪದಕ ಗೆದ್ದ ಭಾರತೀಯರು: - ಕೆ.ಡಿ. ಜಾಧವ್ -1952 ರಲ್ಲಿ ಕಂಚು. - ಸುಶೀಲ್ ಕುಮಾರ್ - 2008 ರಲ್ಲಿ ಕಂಚು, ಮತ್ತು 2012 ರಲ್ಲಿ ಬೆಳ್ಳಿ. - ಯೋಗೇಶ್ವರ್ ದತ್ - 2012 ರಲ್ಲಿ ಕಂಚು. - ಸಾಕ್ಷಿ ಮಲಿಕ್ - 2016 ರಲ್ಲಿ ಕಂಚು. - ರವಿಕುಮಾರ್ ದಹಿಯಾ - 2021 ರಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ಹರಿಯಾಣ ಸರ್ಕಾರವು ಬೆಳ್ಳಿ ಪದಕ ವಿಜೇತರಾದ ರವಿಕುಮಾರ್ ದಹಿಯಾಗೆ 4 ಕೋಟಿ ನಗದು ಬಹುಮಾನವನ್ನು ಹಾಗೂ ಕ್ಲಾಸ್ 1 ದರ್ಜೆಯ ಉದ್ಯೋಗ ಒದಗಿಸಲಾಗುವದು ಎಂದು ಘೋಷಣೆ ಮಾಡಿದೆ. * ಅಲ್ಲದೇ ಶೇ. 50 ರಷ್ಟು ರಿಯಾಯಿತಿಯೊಂದಿಗೆ ಹರಿಯಾಣ ರಾಜ್ಯದ ಯಾವುದೇ ಪ್ರದೇಶದಲ್ಲಿ ಒಂದು ಪ್ಲಾಟ್ ನೀಡಲಾಗುವುದು, ಹಾಗೂ ರವಿಕುಮಾರ್ ದಹಿಯಾ ಅವರ ಗ್ರಾಮವಾದ ನಹ್ರಿಯಲ್ಲಿ ಕುಸ್ತಿ ತರಬೇತಿಗಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವುದಾಗಿ ಹರಿಯಾಣ ಸರ್ಕಾರ ಘೋಷಣೆ ಮಾಡಿದೆ.