Job Description: * ಉತ್ತರಾಖಂಡ್ ರಾಜ್ಯದ ರೂರ್ಕಿಯಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT ರೂರ್ಕೀ)ಯು ಭೂಕಂಪದ ಮುಂಚಿನ ಎಚ್ಚರಿಕೆ ಮೊಬೈಲ್ ಆಪ್'ನ್ನು ಬಿಡುಗಡೆ ಮಾಡಿದೆ. * ಉತ್ತರಾಖಂಡ ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಮೊಬೈಲ್ ಆಪ್ ನ್ನು ಸಿದ್ದಪಡಿಸಿದೆ. * ಈ ಆಪ್ ಭೂಕಂಪದ ಆರಂಭವನ್ನು ಪತ್ತೆಹಚ್ಚಬಲ್ಲದು ಹಾಗೂ ರಾಜ್ಯದಲ್ಲಿ ಗಮನಾರ್ಹವಾದ ನಡುಕ ಸಂಭವಿಸುವಕ್ಕಿಂತ ಮೊದಲೇ ಎಚ್ಚರಿಕೆಗಳನ್ನು ನೀಡುತ್ತದೆ ಎಂದಿದ್ದಾರೆ. * ಈ ಆಪ್ ನ್ನು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಸಹಾಯದೊಂದಿಗೆ ಮೊದಲು ಉತ್ತರಾಖಂಡದ ಗರ್ವಾಲ್ ಪ್ರದೇಶಕ್ಕೆ ಪ್ರಾಯೋಗಿಕವಾಗಿ ಪ್ರಾರಂಭಿಸಿಲಾಗಿದೆ. * ಉತ್ತರಾಖಂಡದ ಗರ್ವಾಲ್ ಹಾಗೂ ಕುಮಾನ್ ಪ್ರದೇಶಗಳ ಹೆಚ್ಚಿನ ಭೂಪ್ರದೇಶಗಳಲ್ಲಿ ಈ ಆಪ್ ನ ಸಂವೇದಕಗಳನ್ನು ಅಳವಡಿಸಲಾಗಿದೆ. * EEW (earthquake early warning) ವ್ಯವಸ್ಥೆಯು ಭೂಕಂಪಗಳ ಅಲೆಗಳ ವೇಗದ ಆಧಾರದ ಮೇಲೆ ತನ್ನ ಕಾರ್ಯನಿರ್ವಹಿಸುತ್ತದೆ, ಹಾಗೂ ಎಚ್ಚರಿಕೆಯನ್ನು ನೀಡುತ್ತದೆ.