Job Description: * ಈ ಬಾರಿಯ ಟೋಕಿಯೊ ಒಲಂಪಿಕ್ಸ್ ನಲ್ಲಿ ಮಹಿಳಾ ವಿಭಾಗದ 400 ಮೀ. ಹರ್ಡಲ್ಸ್ ನಲ್ಲಿ ಅಮೆರಿಕದ ಓಟಗಾರ್ತಿ ಸಿಡ್ನಿ ಮೆಕ್ಲಾಫ್ಲಿನ್ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ. * ಈ ಸ್ಪರ್ಧೆಯಲ್ಲಿ ಡೆಲಿಲಾ ಮುಹಮ್ಮದ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ನೆದರ್ಲೆಂಡ್ಸ್ ನ ಫೆಮ್ಕೆ ಬೋಲ್ ಎನ್ನುವರು ಈ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ಸಿಡ್ನಿ ಮೆಕ್ಲಾಫ್ಲಿನ್ ಅವರು 2019ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು, ಅಲ್ಲದೇ ಇತ್ತೀಚಿಗೆ ಜೂನ್ ತಿಂಗಳಿನಲ್ಲಿ ನಡೆದ ಒಲಿಂಪಿಕ್ ಟ್ರಯಲ್ಸ್ ನಲ್ಲಿ 400 ಮೀಟರ್ ಹರ್ಡಲ್ಸ್ ನ್ನು ಕೇವಲ 51.90 ಸೆಕೆಂಡುಗಳಲ್ಲಿ ಮುಗಿಸಿ ವಿಶ್ವ ದಾಖಲೆ ಬರೆದಿದ್ದರು, ಆದರೆ ಈ ಟೋಕಿಯೋ ಒಲಿಂಪಿಕ್ ಫೈನಲ್ ನಲ್ಲಿ ಕೇವಲ 51.40 ಸೆಕೆಂಡುಗಳಲ್ಲಿ ಓಡಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.