Job Description: * ಶೀಘ್ರದಲ್ಲೇ ಲಕ್ಷದ್ವೀಪದಲ್ಲಿ 800 ಕೋಟಿ ವೆಚ್ಚದ ಮಾಲ್ಡೀವ್ಸ್ ಶೈಲಿಯ ವಾಟರ್ ವಿಲ್ಲಾಗಳನ್ನು ಸ್ಥಾಪನೆ ಮಾಡಲಾಗುವದು ಎಂದು ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ತಿಳಿಸಿದ್ದಾರೆ. * ಭಾರತದಲ್ಲಿಯೇ ಇದೇ ಮೊದಲ ಯೋಜನೆಯಾಗಿದೆ ಇದರ ಅಡಿಯಲ್ಲಿ ಸೌರಶಕ್ತಿ ಚಾಲಿತ ಹಾಗೂ ಪರಿಸರ ಸ್ನೇಹಿ ವಾಟರ್ ವಿಲ್ಲಾ ಮೂಲಕ ಎಲ್ಲ ರೀತಿಯ ಸೌಲಭ್ಯವನ್ನು ನೀಡಲಾಗುವದು ಎಂದಿದ್ದಾರೆ. * ಪ್ರಸ್ತುತ ಲಕ್ಷದ್ವೀಪದ ಮಿನಿಕಾಯ್, ಸುಹೇಲಿ ಮತ್ತು ಕದ್ಮತ್ ದ್ವೀಪಗಳಲ್ಲಿ ಈ ಮಾಲ್ಡೀವ್ಸ್ ಶೈಲಿಯ ವಾಟರ್ ವಿಲ್ಲಾಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * 2019 ರಲ್ಲಿ ಲಕ್ಷದ್ವೀಪ ಆಡಳಿತವು ಪರಿಸರ ಪ್ರವಾಸೋದ್ಯಮ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಜಾಗತಿಕ ಟೆಂಡರ್'ನ್ನು ಮಂಡನೆ ಮಾಡಿತ್ತು. * ಅರಬ್ಬಿ ಸಮುದ್ರದಲ್ಲಿನ 36 ದ್ವೀಪಗಳ ಒಂದು ದ್ವೀಪಸಮೂಹವೆ ಲಕ್ಷದ್ವೀಪವಾಗಿದೆ, ಹಾಗೂ ಈ ಲಕ್ಷದ್ವೀಪ ಭಾರತದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿದೆ, ಕವರಟ್ಟಿ ಎಂಬ ಪ್ರದೇಶವು ಲಕ್ಷದ್ವೀಪದ ರಾಜಧಾನಿಯಾಗಿದೆ. * ಪ್ರಸ್ತುತ ಲಕ್ಷದ್ವೀಪವು ಕೇರಳ ಹೈಕೋರ್ಟ್ ಅಡಿಯ ನ್ಯಾಯವ್ಯಾಪ್ತಿಯನ್ನು ಹೊಂದಿದೆ.