Job Description: * ಕೇಂದ್ರ ಸರ್ಕಾರವು 2021 ರ ಏಪ್ರಿಲ್. 1 ರಿಂದ 2026 ರ ಮಾರ್ಚ್. 31 ರವರೆಗೆ 'ಸಮಗ್ರ ಶಿಕ್ಷಣ ಅಭಿಯಾನ' 5 ವರ್ಷ ವಿಸ್ತರಣೆ ಮಾಡಲು ಅನುಮೋದನೆ ನೀಡಿದೆ, ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಿಳಿಸಿದ್ದಾರೆ. * ಕೇಂದ್ರ ಸಚಿವ ಸಂಪುಟವು ಅಂದಾಜು 2.94 ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿನ ಸಮಗ್ರಾ ಶಿಕ್ಷಣ ಅಭಿಯಾನ-2.0 ಗೆ ಅನುಮೋದನೆ ನೀಡಿದೆ. * ಈ ಸಮಗ್ರ ಶಿಕ್ಷಣ ಅಭಿಯಾನ-2.0 ದಿಂದ ಪ್ರಸ್ತುತ ಎಲ್ಲಾ ಬಾಲಕಿಯರ ಹಾಸ್ಟೆಲ್'ಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ನೀಡಲಾಗುವದು, ಇದರ ಜೊತೆಯಲ್ಲಿ ಎಲ್ಲಾ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳನ್ನು 12 ನೇ ತರಗತಿಯವರೆಗೆ ಮೇಲ್ದರ್ಜೆ ಮಾಡುವದು ಇನ್ನು ಹಲವು ನಿಬಂಧನೆಗಳು ಈ ಸಮಗ್ರ ಶಿಕ್ಷಣ ಅಭಿಯಾನದಲ್ಲಿ ಸೇರಿ ಕೊಂಡಿವೆ.