Job Description: * ಟೋಕಿಯೊ ಒಲಿಂಪಿಕ್ಸ್ ನ ಮ್ಯಾರಥಾನ್ ಈಜು ಸ್ಪರ್ಧೆಯ 10 ಕಿ.ಮೀ. ವಿಭಾಗದಲ್ಲಿ ಜರ್ಮನಿಯ ಫ್ಲೋರಿಯನ್ ವೆಲ್ಬ್ರಾಕ್' ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ. * ಹಂಗೇರಿಯ ಕ್ರಿಸ್ಟೊಫ್ ರಾಸೊವಸ್ಕಿ ಅವರು ಬೆಳ್ಳಿ ಪದಕ ಜಯಿಸಿದರು. * ಇಟಲಿಯ ಗ್ರೆಗೊರಿಯೊ ಪಾಲ್ಟ್ರಿನೆರಿ ಅವರು ಕಂಚಿನ ಪದಕವನ್ನು ಪಡೆದುಕೊಂಡರು. * ಇದೇ ಮ್ಯಾರಥಾನ್ ಈಜು ಸ್ಪರ್ಧೆಯ ಕೂಟದಲ್ಲಿ ಜರ್ಮನಿಯ ಫ್ಲೊರಿಯನ್ ವೆಲ್ಬ್ರಾಕ್ 1500 ಮೀ. ಫ್ರೀಸ್ಟೈಲ್ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು, ಹಾಗೂ ಇಟಲಿಯ ಗ್ರೆಗೊರಿಯೊ ಪಾಲ್ಟ್ರಿನೆರಿ ಅವರು 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.