Job Description: * ಇತ್ತೀಚಿಗೆ ಅಸ್ಸಾಂ ರಾಜ್ಯ ಮತ್ತು ಮಿಜೋರಾಂ ರಾಜ್ಯಗಳ ಗಡಿ ವಿವಾದವು ಉದ್ವೇಗಕ್ಕೆ ಕಾರಣವಾಗಿದ್ದವು, ಇದನ್ನ ಅರಿತ ಕೇಂದ್ರ ಸರ್ಕಾರವು ಇದೀಗ ಈ ರಾಜ್ಯಗಳ ಗಡಿ ವಿವಾದವನ್ನು ಉಪಗ್ರಹ ಚಿತ್ರದ ಸಹಾಯದೊಂದಿಗೆ ಈ ಈಶಾನ್ಯ ರಾಜ್ಯಗಳ ಗಡಿ ಗುರುತಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. * ಈಶಾನ್ಯ ರಾಜ್ಯಗಳ ಗಡಿ ಗುರುತಿಸುವಿಕೆ ಹೊಣೆಗಾರಿಕೆಯನ್ನು ಈಶಾನ್ಯ ಮಂಡಳಿ ಹಾಗೂ ಬಾಹ್ಯಾಕಾಶ ಇಲಾಖೆಯ ಜಂಟಿ ಉಪಕ್ರಮವಾಗಿರುವ ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರಕ್ಕೆ ವಹಿಸಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಉಪಗ್ರಹ ಸೆರೆಹಿಡಿಯುವ ಚಿತ್ರಗಳ ಸಹಾಯದಿಂದ ಅಂತರ ರಾಜ್ಯ ಗಡಿ ವಿವಾದಗಳನ್ನು ಬಗೆಹರಿಸಬಹುದು ಎಂದು ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದರು.