Job Description: * ಮಯನ್ಮಾರ್ ನ ಮಿಲಿಟರಿ ನಾಯಕರಾಗಿರುವ ಸೀನಿಯರ್ ಜನರಲ್ ಮಿನ್ ಆಂಗ್ ಹ್ಲೇಯಿಂಗ್ ಅವರನ್ನು ದೇಶದ ಪ್ರಧಾನಿ ಎಂದು ಮ್ಯಾನ್ಮಾರ್ ಮಿಲಿಟರಿ ಘೋಷಣೆ ಮಾಡಿದೆ, ಮುಂದಿನ 2023 ರಲ್ಲಿ ಚುನಾವಣೆ ನಡೆಸುವ ಸಂಧರ್ಬದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ '2' ವರ್ಷಗಳ ಕಾಲ ಉಸ್ತುವಾರಿ ವಹಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಮಯನ್ಮಾರ್ ಮಿಲಿಟರಿ ಪಡೆಯು ಸುಮಾರು ಆರು ತಿಂಗಳಿಂದ ಮಯನ್ಮಾರ್ ದೇಶದ ನಾಗರಿಕ ಸರ್ಕಾರದ ಅಧಿಕಾರವನ್ನು ಕಿತ್ತುಕೊಂಡದೆ, ಇದೀಗ ಮಯನ್ಮಾರ್ ಸೇನೆಯು 2023 ರಲ್ಲಿ ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದೆ. * ಮಯನ್ಮಾರ್ ದೇಶದಲ್ಲಿ 2023 ರ ಆಗಸ್ಟ್ ತಿಂಗಳಲ್ಲಿ ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸಲಾಗುವುದು ಎಂದು ಸೇನಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.