Job Description: * ಭಾರತೀಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ʼಇ-ರೂಪಿ (e-RUPI) ಆಯಪ್ʼಗೆ ಚಾಲನೆಯನ್ನು ನೀಡಿದರು. * ಈ 'ಇ-ರೂಪಿ' ಆಯಪ್'ನ್ನು ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿದೆ. * ಈ 'e-RUPI' ಆಯಪ್ UPI ಪ್ಲಾಟ್'ಫಾರ್ಮ್ ನಲ್ಲಿ ಕಾರ್ಯ ನಿರ್ವಹಿಸಲಿದೆ, ಹಾಗೂ ಬಳಕೆದಾರರಿಗೆ ಭೌತಿಕ ಸಂವಹನದ ಅಗತ್ಯವಿಲ್ಲದೆ ನಿರ್ದಿಷ್ಟ ಸೇವೆಗಳನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ, ಇದರಿಂದ ಗ್ರಾಹಕರು ಹಾಗೂ ಸೇವಾ ಪೂರೈಕೆದಾರರು ಯಾವುದೇ ಭೌತಿಕ ಇಂಟರ್ಫೇಸ್ ಇಲ್ಲದೆ ವೋಚರ್'ಗಳನ್ನೂ ಬಳಸಿ ವ್ಯವಹಾರ ನಡೆಸಬಹುದಾಗಿದೆ. * ದೇಶದಲ್ಲಿ ಕಲ್ಯಾಣ ಸೇವೆಗಳ ಸೋರಿಕೆ-ನಿರೋಧಕ ವಿತರಣೆಯನ್ನು ಈ 'ಇ-ರೂಪಿ' ಆಪ್ ಖಚಿತಪಡಿಸುತ್ತದೆ ಎಂದು ಸರ್ಕಾರ ತಿಳಿಸಿದೆ. * ಇದು ಡಿಜಿಟಲ್ ಪಾವತಿಗಾಗಿ ನಗದು ರಹಿತ, ಹಾಗೂ ಸಂಪರ್ಕವಿಲ್ಲದ ಸಾಧನವಾಗಿದೆ, ಈ ಆಪ್ ಕ್ಯೂಆರ್ ಕೋಡ್ ಅಥವಾ SMS ಆಧಾರಿತ ಇ-ವೋಚರ್'ಗಳಾಗಿವೆ ಹಣ ವರ್ಗಾವಣೆ ಮಾಡಲು ಬಳಸಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.