Job Description: * ಭಾರತೀಯ ಆಯುಷ್ ಸಚಿವಾಲಯವು UK ಯ ಲಂಡನ್ ಸ್ಕೂಲ್ ಆಫ್ ಹೈಜೀನ್ ಹಾಗೂ ಟ್ರಾಪಿಕಲ್ ಮೆಡಿಸಿನ್ (LSHTM) ಸಹಭಾಗಿತ್ತ್ವದಲ್ಲಿ 'ಅಶ್ವಗಂಧ' ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಲಿದೆ, ಈ ಪ್ರಯೋಗವು COVID-19 ಸೋಂಕಿನ ಮೇಲೆ ಪರಿಣಾಮವನ್ನು ಪರಿಶೀಲಿಸಲು ನಡೆಸಲಿದೆ. * ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಹಾಗೂ ಲಂಡನ್ ಸ್ಕೂಲ್ ಆಫ್ ಹೈಜೀನ್ ಹಾಗೂ ಟ್ರಾಪಿಕಲ್ ಮೆಡಿಸಿನ್ (LSHTM) ಇತ್ತೀಚೆಗೆ ಅಶ್ವಗಂಧದ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಉಭಯ ದೇಶಗಳು ಒಪ್ಪಿ ಪತ್ರಕ್ಕೆ ಸಹಿ ಹಾಕಿವೆ. * ಯುಕೆ ಮೂರೂ ನಗರಗಳ ಲೀಸೆಸ್ಟರ್, ಬರ್ಮಿಂಗ್ಹ್ಯಾಮ್ ಹಾಗೂ ಲಂಡನ್'ನಲ್ಲಿನ 2,000 ಜನರ ಮೇಲೆ ಈ ಅಶ್ವಗಂಧದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಯಲಿದೆ ಎಂದು ತಿಳಿಸಿದ್ದಾರೆ. * ವೈಜ್ಞಾನಿಕವಾಗಿ ಅಶ್ವಗಂಧವನ್ನು ವಿಥಾನಿಯಾ ಸೊಮ್ನಿಫೆರಾ ಎನ್ನುವರು, ಸಾಮಾನ್ಯವಾಗಿ 'ಭಾರತೀಯ ಚಳಿಗಾಲದ ಚೆರ್ರಿ' ಎಂದು ಕರೆಯುತ್ತಾರೆ.