Job Description: * ಪ್ರಸ್ತುತ ತೆಂಗು ಅಭಿವೃದ್ಧಿ ಮಂಡಳಿ ಮಸೂದೆ 2021 ನ್ನು ರಾಜ್ಯಸಭೆಯು 2021 ರ ಜುಲೈ. 30 ರಂದು ಅಂಗೀಕರಿಸಿದೆ, ಈ ಮಸೂದೆಯು ಸರ್ಕಾರಿ ಅಧಿಕಾರಿಗಳಿಗಿಂತ ವೃತ್ತಿಪರರನ್ನು ಕಾರ್ಯನಿರ್ವಾಹಕೇತರ ಅಧ್ಯಕ್ಷರನ್ನಾಗಿ ನೇಮಿಸಲು ಸಹಾಯ ಮಾಡಿಕೊಡಲಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. * ಈ ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ಗುಜರಾತ್ ಹಾಗೂ ಆಂಧ್ರಪ್ರದೇಶ ರಾಜ್ಯಗಳು ತಮ್ಮ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಬಹುದಾಗಿದೆ. * ಈ ತೆಂಗು ಅಭಿವೃದ್ಧಿ ಮಂಡಳಿ ಭಾರತ ಸರ್ಕಾರದ ಕೃಷಿ ಸಚಿವಾಲಯದ ಅಡಿಯಲ್ಲಿರುವ ಒಂದು ಕಾನೂನು ಸಂಸ್ಥೆಯಾಗಿದ್ದು. * ತೆಂಗು ಅಭಿವೃದ್ಧಿ ಮಂಡಳಿಯುನ್ನು 1981 ರ ಜನೇವರಿ. 12 ರಂದು ಸ್ಥಾಪನೆ ಮಾಡಲಾಗಿದೆ, ಹಾಗೂ ಇದು ಕೇರಳದ ಕೊಚ್ಚಿಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ, ಅಲ್ಲದೇ ಪ್ರಾದೇಶಿಕ ಕಚೇರಿಗಳು ಬೆಂಗಳೂರು, ಚೆನ್ನೈ ಮತ್ತು ಗುವಾಹಟಿ ನಗರಗಳಲ್ಲಿ ಹೊಂದಿದೆ. * ತೆಂಗು ಅಭಿವೃದ್ಧಿ ಮಂಡಳಿಯು ಕೇರಳ ರಾಜ್ಯದ ಅಲುವಾ ಸಮೀಪದ ವಾಜಕುಲಂನಲ್ಲಿ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರವನ್ನು ಸ್ಥಾಪನೆ ಮಾಡಿದೆ.