Job Description: * 2021 ರ ಪ್ರತಿಷ್ಠಿತ ರಾಷ್ಟ್ರೀಯ ಲೋಕಮಾನ್ಯ ತಿಲಕ್ ಪ್ರಶಸ್ತಿ ವಿಜೇತ ಎಂದು ಉದ್ಯಮಿ ಸೈರಸ್ ಪೂನವಲ್ಲಾ ಅವರನ್ನು ಹೆಸರಿಸಲಾಗಿದೆ, ಇವರು ಪುಣೆಯಲ್ಲಿನ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಥಾಪಕರಾಗಿದ್ದಾರೆ. * ಪ್ರತಿ ವರ್ಷ ಆಗಸ್ಟ್. 1 ರಂದು ಸ್ವಾತಂತ್ರ್ಯ ಹೋರಾಟಗಾರನ ಸಾವಿನ ವಾರ್ಷಿಕೋತ್ಸವದಂದು ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ, ಆದರೆ ಈ ವರ್ಷ ಪ್ರಶಸ್ತಿ ಪ್ರಧಾನ ಮಾಡುವದನ್ನು ಆಗಸ್ಟ್. 13 ಕ್ಕೆ ನಿಗದಿಮಾಡಿದ್ದಾರೆ. * ಈ ಪ್ರಶಸ್ತಿಯನ್ನು ಮೊದಲು ಬಾರಿ 1983 ರಲ್ಲಿ ಪ್ರಧಾನ ಮಾಡಲಾಗಿತ್ತು. * ಈ ಲೋಕಮಾನ್ಯ ತಿಲಕ್ ಪ್ರಶಸ್ತಿ ಪಡೆದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಡಾ. ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ, ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನ ಮಾಡಲಾಗಿದೆ.